Top

ಮುಂಬೈಗೆ ರೋಚಕ ಜಯ: ಕೆಕೆಆರ್​ಗೆ ಆಘಾತ

ತೀವ್ರ ಜಿದ್ದಾಜಿದ್ದಿನಿಂದ ಕೂಡಿದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ 13 ರನ್ ಗಳಿಂದ ಕೋಲ್ಕತಾ ನೈಟ್​ರೈಡರ್ಸ್ ತಂಡವನ್ನು ಬಗ್ಗುಬಡಿದು ಐಪಿಎಲ್ ಟಿ-20 ಟೂರ್ನಿಯ ನಾಕೌಟ್ ಹಂತಕ್ಕೆ ಪ್ರವೇಶಿಸುವ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ.

ಭಾನುವಾರ ನಡೆದ ದಿನದ ಮೊದಲ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ ಒಡ್ಡಿದ 182 ರನ್​ಗಳ ಕಠಿಣ ಗುರಿ ಬೆಂಬತ್ತಿದ ಕೆಕೆಆರ್ 20 ಓವರ್​ಗಳಲ್ಲಿ 6 ವಿಕೆಟ್​ಗೆ 168 ರನ್ ಗಳಿಸಲಷ್ಟೇ ಶಕ್ತವಾಯಿತು.

ಪ್ರಮುಖ ಘಟ್ಟಗಳಲ್ಲಿ ವಿಕೆಟ್ ಕಳೆದುಕೊಂಡು ಒತ್ತಡಕ್ಕೆ ಸಿಲುಕಿತು. ಕೆಕಾರ್ ಪರ ರಾಬಿನ್ ಉತ್ತಪ್ಪ 35 ಎಸೆತಗಳಲ್ಲಿ 8 ಬೌಂಡರಿ ಹಾಗೂ 3 ಸಿಕ್ಸರ್ ಸೇರಿದಂತೆ 54 ರನ್ ಸಿಡಿಸಿದರು. ನಾಯಕ ದಿನೇಶ್ ಕಾರ್ತಿಕ್ 26 ಎಸೆತಗಳಲ್ಲಿ 5 ಬೌಂಡರಿ ಹಾಗೂ 1 ಸಿಕ್ಸರ್ ಸೇರಿದ 36 ರನ್ ಬಾರಿಸಿ ನಡೆಸಿದ ಹೋರಾಟ ವಿಫಲವಾಯಿತು.

ಇದಕ್ಕೂ ಮುನ್ನ ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ ಆರಂಭಿಕ ಸೂರ್ಯಕುಮಾರ್ ಅವರ ಅರ್ಧಶತಕ ಹಾಗೂ ಮೊದಲ ವಿಕೆಟ್​ಗೆ ಲೆವಿಸ್ (43) ಜೊತೆ 91 ರನ್ ಜೊತೆಯಾಟದಿಂದ ಬೃಹತ್​ ಮೊತ್ತ ಕಲೆ ಹಾಕಿತು. ಮಧ್ಯಮ ಕ್ರಮಾಂಕದಲ್ಲಿ ಹಾರ್ದಿಕ್ ಪಾಂಡ್ಯ ಅಜೇಯ 35 ರನ್ ಬಾರಿಸಿ ತಂಡವನ್ನು ಆಧರಿಸಿದರು.

  • ಸಂಕ್ಷಿಪ್ತ ಸ್ಕೋರ್
  • ಮುಂಬೈ ಇಂಡಿಯನ್ಸ್ 20 ಓವರ್ 4 ವಿಕೆಟ್​ಗೆ 181 (ಸೂರ್ಯಕುಮಾರ್ 59, ಲೆವಿಸ್​ 43, ಹಾರ್ದಿಕ್ ಅಜೇಯ 35, ರಸೆಲ್​ 12/2, ನೀಲ್ 35/2).
  • ಕೋಲ್ಕತಾ ನೈಟ್ ರೈಡರ್ಸ್ 20 ಓವರ್​ 6 ವಿಕೆಟ್ 168 (ಉತ್ತಪ್ಪ 54, ಕಾರ್ತಿಕ್ ಅಜೇಯ 36, ರಾಣಾ 31, ಹಾರ್ದಿಕ್ 19/2).

Next Story

RELATED STORIES