Top

ಪ್ರೊಫೆಸರ್ ಸೇರಿ 5 ಉಗ್ರರನ್ನು ಹೊಡೆದುರುಳಿಸಿದ ಸೇನೆ

ಜಮ್ಮು-ಕಾಶ್ಮೀರದ ಸೋಫಿಯಾನ್ ಜಿಲ್ಲೆಯಲ್ಲಿ ಭಾರತೀಯ ಯೋಧರು ಭಾನುವಾರ ನಡೆಸಿದ ಕಾರ್ಯಾಚರಣೆಯಲ್ಲಿ ಪ್ರೊಫೆಸರ್​ ಸೇರಿದಂತೆ 5 ಮಂದಿ ಉಗ್ರರನ್ನು ಹೊಡೆದುರಳಿಸಿದೆ.

ಇಜ್ಬುಲ್ ಮುಜಾಯಿದ್ದೀನ್​ ಮುಖಂಡ ಸದ್ದಾಂ ಪೆಡ್ಡಾರ್​ ಮೃತಪಟ್ಟ ಉಗ್ರರಲ್ಲಿ ಒಬ್ಬರು ಎಂದು ಸೇನೆ ಶಂಕಿಸಿದೆ. ಅಲ್ಲದೇ ಇದರಲ್ಲಿ ಒಬ್ಬ ಪ್ರೊಫೆಸರ್ ಕೂಡ ಸೇರಿದ್ದಾರೆ ಎನ್ನಲಾಗಿದ್ದು, ಮರಣೋತ್ತರ ಪರೀಕ್ಷೆ ನಂತರವೇ ಈ ವಿಷಯ ದೃಢಪಡಲಿದೆ ಎಂದು ಸೇನಾಧಿಕಾರಿಗಳು ತಿಳಿಸಿದ್ದಾರೆ.

ಸೋಫಿಯಾನ್ಬ ಜಿಲ್ಲೆಯ ಬಗಾಮ್ ಜೈನ್​ ಪೊರಾ ಗ್ರಾಮಗಳಲ್ಲಿ ಕಾರ್ಯಾಚರಣೆ ನಡೆಸಲಾಗಿದ್ದು, 5 ಉಗ್ರರ ಮೃತದೇಹಗಳು ಪತ್ತೆಯಾಗಿವೆ ಎಂದು ಸೇನೆ ಟ್ವೀಟರ್ ನಲ್ಲಿ ಹೇಳಿಕೊಂಡಿದೆ.

Next Story

RELATED STORIES