Top

ನಿಜಲಿಂಗಪ್ಪ, ಅಂಬೇಡ್ಕರ್​ಗೆ ಕಾಂಗ್ರೆಸ್ ಅಪಮಾನ: ಮೋದಿ ಆರೋಪ

ನಿಜಲಿಂಗಪ್ಪ ಹಾಗೂ ಡಾ.ಬಿ.ಆರ್. ಅಂಬೇಡ್ಕರ್ ಅವರಂತಹ ಹಿರಿಯ ದಲಿತ ನಾಯಕರನ್ನು ಕಾಂಗ್ರೆಸ್ ಕಡೆಗಣಿಸಿತ್ತು. ಈಗ ದಲಿತ ಸಮುದಾಯ ಎಚ್ಚೆತ್ತುಕೊಳ್ಳುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದರು.

ಚಿತ್ರದುರ್ಗದಲ್ಲಿ ಬಿಜೆಪಿಯ ಬಹಿರಂಗ ಸಮಾವೇಶದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ವೋಟಿಗಾಗಿ ಇತಿಹಾಸ ತಿರುಚಿದೆ. ಇಲ್ಲಿನ ನಾಯಕ ನಿಜಲಿಂಗಪ್ಪ ಎಂತಹ ದೊಡ್ಡ ನಾಯಕರು. ಶೋಷಿತರ ಹಕ್ಕುಗಳಿಗಾಗಿ ಶ್ರಮಿಸಿದ್ದ ನಿಜಲಿಂಗಪ್ಪ ಅವರನ್ನು ಗುರುತಿಸದೇ ಅವರ ಜೊತೆ ಕಾಂಗ್ರೆಸ್ ನಡೆದುಕೊಂಡದ್ದು ಗೊತ್ತಿದೆ​. ನಿಜಲಿಂಗಪ್ಪರವರಿಗೆ ಕಾಂಗ್ರೆಸ್​ ಅವಮಾನ ಮಾಡಿದೆ. ಅಂಬೇಡ್ಕರ್​ರವರಿಗೂ ಕಾಂಗ್ರೆಸ್ ಅಗೌರವ ತೋರಿದೆ​. ಇದೇ ರೀತಿ ಹಲವು ನಾಯಕರನ್ನ ಕಾಂಗ್ರೆಸ್​ ಬದಿಗೆ ತಳ್ಳಿದೆ ಎಂದು ಮೋದಿ ಆರೋಪಿಸಿದರು.

ದೆಹಲಿಯಲ್ಲಿ ಎಲ್ಲೇ ಹೋದರೂ ಒಂದೇ ಪರಿವಾರದ ಸ್ಮಾರಕವಿದೆ. ಕಾಂಗ್ರೆಸ್​ ವಂಶದವರ ಆಸ್ತಿ, ಸ್ಮಾರಕಗಳೇ ಜಾಸ್ತಿ ಇವೆ. ಭಾರತ ರತ್ನ ಪ್ರಶಸ್ತಿ ಕೇವಲ ಒಂದೇ ಕುಟುಂಬಕ್ಕೆ ಸೀಮಿತ. ಅದೆಷ್ಟೋ ದಿನಗಳ ಬಳಿಕ ವಾಜಪೇಯಿಗೆ ಭಾರತ ರತ್ನ ಸಿಕ್ಕಿದೆ. ಕೇಂದ್ರದಲ್ಲಿ ಬಿಜೆಪಿ ಬಂದ ಮೇಲೆ ದಲಿತ ರಾಷ್ಟ್ರಪತಿ ಆಯ್ಕೆ. ಕಾಂಗ್ರೆಸ್​ನಿಂದ ದಲಿತ ಸಮುದಾಯಕ್ಕೆ ನಿರಂತರ ಶೋಷಣೆ ಆಗುತ್ತಿತ್ತು. ಬಿಜೆಪಿ ಅಧಿಕಾರದಿಂದ ಕಾಂಗ್ರೆಸ್​ಗೆ ನಡುಕ ಶುರುವಾಗಿದೆ ಎಂದು ಮೋದಿ ವಿವರಿಸಿದರು.

47 ಅಂಶಗಳನ್ನು ದಲಿತ ಕಾಯ್ದೆಯಲ್ಲಿ ಸೇರಿಸಿದ್ದೇವೆ. ದಲಿತರ ಕಲ್ಯಾಣಕ್ಕಾಗಿ ಅನೇಕ ಯೋಜನೆಗಳನ್ನ ತಂದಿದ್ದೇವೆ. ಕಾಗದದಲ್ಲಿ ಮಾತ್ರ ಕಾಂಗ್ರೆಸ್ ಸಾಧನೆ ಕಾಣಿಸುತ್ತಿವೆ​. ಪಾಪದ ಕೆಲಸ ಮಾಡುತ್ತಿರುವ ಕಾಂಗ್ರೆಸ್​ಗೆ ಪಾಠ ಕಲಿಸಿ ಎಂದು ಮೋದಿ ಕರೆ ನೀಡಿದರು.

Next Story

RELATED STORIES