Top

ನಾನೇಕೆ ಸಿಎಂ ಆಗಬಾರದು..?: ಡಿ.ಕೆ.ಶಿವಕುಮಾರ್

ನೆಲಮಂಗಲ:ನಾನೇಕೆ ಸಿಎಂ ಆಗಬಾರದು ಎನ್ನುವ ಮೂಲಕ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗುವ ಆಸೆ ವ್ಯಕ್ತಪಡಿಸಿದ್ದಾರೆ. ನೆಲಮಂಗಲದ ರೋಡ್ ಶೋ ವೇಳೆ ಮಾತನಾಡಿದ ಶಿವಕುಮಾರ್, ದೇವೇಗೌಡರು ಸಿಎಂ ಆಗಿಲ್ವಾ..? ಕುಮಾರಸ್ವಾಮಿ ಸಿಎಂ ಆಗಿಲ್ವಾ..? ನಾನೇಕೆ ಸಿಎಂ ಆಗಬಾರದಾ ಎಂದು ಕೇಳಿದ್ದಾರೆ. ಈ ಮೂಲಕ ಸಿಎಂ ಆಗುವ ಆಸೆ ವ್ಯಕ್ತಪಡಿಸಿದ್ದಾರೆ ಡಿ.ಕೆ.ಶಿ. ಅಲ್ಲದೇ ದೇಶದಲ್ಲಿ ಕಾಂಗ್ರೆಸ್ ನಶಿಸಿ ಹೋಗಲ್ಲ. ಇದಕ್ಕೆ ಸಾಕ್ಷಿ ಇಲ್ಲಿ ಸೇರಿರುವ ಸಾವಿರಾರು ಕಾಂಗ್ರೆಸ್ ಕಾರ್ಯಕರ್ತರು. ಬಿಜೆಪಿ 168 ಕ್ಷೇತ್ರಗಳಲ್ಲಿ ಮಾತ್ರ ಪ್ರಮುಖವಾಗಿ ಸ್ಪರ್ಧೆ ಮಾಡಿದೆ. ಚಿಕ್ಕಬಳ್ಳಾಪುರ, ಮಂಡ್ಯ, ಮೈಸೂರು ಭಾಗದಲ್ಲಿ ಬಿಜೆಪಿ ನೆಲೆಯೇ ಇಲ್ಲ. ಇನ್ನು ಜೆಡಿಎಸ್ ಕಳೆದ ಬಾರಿ 40ಸ್ಥಾನಕ್ಕೆ ತೃಪ್ತಿ ಪಟ್ಟಿತ್ತು. ಈ ಚುನಾವಣೆಯಲ್ಲಿ 13 ಸ್ಥಾನಗಳಿಸಲಷ್ಟೇ ಶಕ್ತವಾಗಿದೆ. ಬಿಜೆಪಿ ಈ ಬಾರಿ ಕೇವಲ 55 ಸ್ಥಾನಗಳನ್ನು ಪಡೆಯುತ್ತದೆ. ರಾಜ್ಯದ ಉದ್ದಗಲಕ್ಕೂ ಕಾಂಗ್ರೆಸ್ ಪರ ಅಲೆ ಇದೆ ಎಂದು ಇಂಧನ ಸಚಿವ, ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

Next Story

RELATED STORIES