Top

ನನ್ನ ವಾಚ್​ ಬದಲು ಮೋದಿ ಸೂಟ್ ಬಗ್ಗೆ ಮಾತನಾಡಿ: ಸಿದ್ದರಾಮಯ್ಯ ತಿರುಗೇಟು

ಪುರಂದರ ದಾಸರು ಹೇಳಿದಂತೆ ಪ್ರಧಾನಿ ನರೇಂದ್ರ ಮೋದಿ ಅವರದ್ದು ಆಚಾರವಿಲ್ಲದ ನಾಲಗೆ. ಸೋಲುವ ಭೀತಿಯಿಂದ ಬಾಯಿಗೆ ಬಂದಂತೆ ಮಾತನಾಡಿಕೊಂಡು ತಿರುಗುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಮಲೇಷ್ಯಾ ಉದ್ಯಮಿ ಈಶ್ವರನ್ ಅವರಿಂದ ಉಡುಗೊರೆ ಪಡೆದಿದ್ದು ವಾಚ್ ಆಗಿತ್ತೇ ಎಂದು ಬಿಜೆಪಿ ವಕ್ತಾರ ಸಂಬಿತ್​ ಪಾತ್ರ ಮಾಡಿದ ಆರೋಪಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಈಶ್ವರನ್ ಯಾರು ಅಂತ ನಂಗೆ ಗೊತ್ತಿಲ್ಲ. ಬಿಜೆಪಿಯವರು ನನ್ನ ವಾಚ್ ಬಗ್ಗೆ ಮಾತನಾಡುವ ಮೊದಲು ಮೋದಿ ಅವರ ಸೂಟ್ ಬಗ್ಗೆ ಮಾತನಾಡಲಿ. ಸೂಟ್ ಹರಾಜು ಹಾಕಿ ಅದರ ತೆರಿಗೆ ಕಟ್ಟಿದ್ದಾರಾ? ಎಂದು ತಿರುಗೇಟು ನೀಡಿದ್ದಾರೆ.

ಯಡಿಯೂರಪ್ಪಗೆ ಮಾನಸಿಕ ಸ್ಥಿಮಿತ ಕಳೆದು ಹೋಗಿದೆ. ಯಾವಾಗ ನೋಡಿದರೂ ನಾನು ಮುಖ್ಯಮಂತ್ರಿ ಆಗ್ತೀನಿ ಅಂತ ಹೇಳಿಕೊಂಡು ತಿರುಗುತ್ತಿದ್ದಾರೆ. ಇವರೆಲ್ಲಾ ಕಳಂಕಿತರು. ಇವರಿಗೆ ಅಧಿಕಾರ ಸಿಗೋಕೆ ಸಾಧ್ಯವಾ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

Next Story

RELATED STORIES