Top

ಚುನಾವಣೆ ನಂತರವೂ ಬಿಜೆಪಿ ವಿರುದ್ಧ ಹೋರಾಟ: ಪ್ರಕಾಶ್ ರೈ

ಕೇಂದ್ರ ಸರ್ಕಾರದ ವಿರುದ್ಧ ನಟ ಪ್ರಕಾಶ್ ರೈ ಕಿಡಿಕಾರಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಜಸ್ಟ್ ಆಸ್ಕಿಂಗ್ ಒಂದು ರಾಜಕೀಯ ಪಕ್ಷವಲ್ಲ. ಎಲ್ಲರನ್ನೂ ಪ್ರಶ್ನಿಸುವುದು ನಮ್ಮ ಜವಾಬ್ದಾರಿ. ಬಿಜೆಪಿ ಸರ್ಕಾರದ ಸುಳ್ಳುಗಳು ನಮಗೆ ಕಷ್ಟ ಆಗುತ್ತಿದೆ. ನಾನು ಪ್ರಶ್ನೆ ಕೇಳಿದ್ರೆ, ಹಿಂದು ಧರ್ಮದ ವಿರೋಧಿ ಎನ್ನುತ್ತೀರಿ ಯಾಕೆ..?.. ನನ್ನ ವೈಯಕ್ತಿಕ ಜೀವನದ ಬಗ್ಗೆ ಯಾಕೆ ಮಾತನಡುತ್ತೀರಿ ಎಂದು ಪ್ರಶ್ನಿಸಿದ್ದಾರೆ. ನಾನು ಕೆ್ಟ್ಟ ನಟನಲ್ಲ. ಆದರೂ ಯಾವುದೇ ಬಾಲಿವುಡ್ ಚಿತ್ರಗಳ ಆಫರ್ ಬರುತ್ತಿಲ್ಲ. ನನ್ನ ಚಿತ್ರಗಳು ಚೆನ್ನಾಗಿಯೇ ನಡೆಯುತ್ತಿದೆ. ಇದುವರೆಗೆ ನಿರ್ದೇಶಕರ ಯಾವುದೇ ಫೋನ್ ಕರೆ ಬಂದಿಲ್ಲ. ಬಿಜೆಪಿಯಿಂದ ಈ ವಿಷಯದಲ್ಲಿಯೂ ಭಯದ ವಾತಾವರಣ ಸೃಷ್ಟಿಸಲಾಗಿದೆ ಎಂದು ಬಿಜೆಪಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ವೇಳೆ ಮಾತನಾಡಿದ ರೈ, ಜಸ್ಟ್ ಆಸ್ಕಿಂಗ್ ಪ್ರಶ್ನೆಗಳನ್ನ ಮಾತ್ರ ಕೇಳಲ್ಲ, ಚರ್ಚಾಕೂಟ ಏರ್ಪಡಿಸುತ್ತೇವೆ. ಚುನಾವಣೆ ನಂತರವೂ ನಿರಂತರ ಹೋರಾಟ ಮುಂದುವರಿಯುತ್ತದೆ. ನಾನು ಹಿಂದುತ್ವದ ವಿರೋಧಿಯಲ್ಲ. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಬಾರದು, ಕಾಂಗ್ರೆಸ್, ಜೆಡಿಎಸ್ ನಲ್ಲಿ ಯಾವುದನ್ನಾದರೂ ಜನರು ಆಯ್ಕೆ ಮಾಡಿಕೊಳ್ಳಲಿ, ಯಾವುದೇ ಸರ್ಕಾರ ಬಂದರೂ ನಾನು ಪ್ರಶ್ನೆ ಕೇಳುತ್ತೇನೆ ಎಂದಿದ್ದಾರೆ.

Next Story

RELATED STORIES