Top

ಖರ್ಗೆ ವಿರುದ್ಧ ಶ್ರೀನಿವಾಸ್ ಪ್ರಸಾದ್ ವಾಗ್ದಾಳಿ

ಕಾಂಗ್ರೆಸ್ ನಲ್ಲಿ ದಲಿತರನ್ನ ಕಡೆಗಣಿಸಲಾಗುತ್ತಿದೆ ಎಂದು ವಿ ಶ್ರೀನಿವಾಸ್ ಪ್ರಸಾದ್ ಮಲ್ಲಿಕಾರ್ಜುನ್ ಖರ್ಗೆ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ. ಇವತ್ತು ಕಾಂಗ್ರೆಸ್ ದಲಿತರನ್ನೆಲ್ಲ ತುಳಿದು ಹಾಕಿದೆ. ಮಲ್ಲಿಕಾರ್ಜುನ ಖರ್ಗೆಗೆ ನಾಚಿಕೆಯಾಗಬೇಕು. ಅವನೊಬ್ಬ ಲೀಡರ್ ಏನ್ರೀ...? ಅವರಿಗೆ ಅಧಿಕಾರ ಇದ್ರೆ ಸಾಕು.ನನ್ನನ್ನು ಮಂತ್ರಿಮಂಡಲದಿಂದ ತೆಗೆದಾಗ ಒಂದು ಪ್ರಶ್ನೆ ಮಾಡಲಿಲ್ಲ.ಸಿದ್ದರಾಮಯ್ಯ ಮುಖ್ಯಮಂತ್ರಿ ಆದಾಗ ನನ್ನ ಮುಂದೆಯೇ ಅಳುತ್ತಿದ್ದ ಖರ್ಗೆ, ಮೂವತ್ತೈದು ನಲವತ್ತು ವರ್ಷದಿಂದ ಕಾಂಗ್ರೆಸ್ ನಲ್ಲಿ ಮಣ್ಣೊತ್ತಿದ್ದೀನಿ. ನಿನ್ನೆ ಮೊನ್ನೆ ಬಂದವನು ಸಿಎಂ ಆಗಿಬಿಟ್ನಲ್ರಿ ಎಂದು ಕಣ್ಣೀರು ಹಾಕಿದ್ರು. ಪರಮೇಶ್ವರ್ ಸಿಎಂ ಆಗಬೇಕು ಅಂತಿದ್ದರು ಅದಕ್ಕೆ ಮೊದಲು ಅಡ್ಡಿಇದ್ದವರೇ ಖರ್ಗೆ, ತುಳಿದವನೇ ಇವನು ಎಂದು ಖರ್ಗೆ ವಿರುದ್ಧ ಶ್ರೀನಿವಾಸ್ ಪ್ರಸಾದ್ ಹರಿಹಾಯ್ದಿದ್ದಾರೆ. ಇಂಥವರೆಲ್ಲ ದಲಿತರಲ್ಲಿ ಇರೋದು ನಾಚಿಕೆಯಾಗತ್ತೆ. ಖರ್ಗೆ ಹೊರಗೊಂದು ಒಳಗೊಂದು ಮಾತಾಡುತ್ತಾರೆ. ಸಿದ್ದರಾಮಯ್ಯನವರೇ ನಮ್ಮ ಕ್ಯಾಪ್ಟನ್ ಅಂತಾರೆ. ಇವರೆಲ್ಲ ನಾಚಿಕೆಗೆಟ್ಟವರು, ಸಿದ್ದರಾಮಯ್ಯ ನಮ್ಮಂಥವರನ್ನು ಸಹಿಸುವುದಿಲ್ಲ. ನಾನು ಸಿದ್ದರಾಮಯ್ಯಗೆ ಯಾವುದರಲ್ಲೂ ಕಡಿಮೆ ಇಲ್ಲ. ಹಿರಿತನ ಅನುಭವ ಜನಪ್ರಿಯತೆ ಯಾವುದರಲ್ಲೂ ಕಡಿಮೆ ಇಲ್ಲ. ಅದಕ್ಕೆ ನನ್ನಂಥವರನ್ನ ಕಂಡರೆ ಅಸೂಯೆ ಎಂದು ಕಾಂಗ್ರೆಸ್ ಮುಖಂಡರ ವಿರುದ್ಧ ಶ್ರೀನಿವಾಸ್ ಪ್ರಸಾದ್ ವಾಗ್ದಾಳಿ ನಡೆಸಿದ್ದಾರೆ.

Next Story

RELATED STORIES