Top

ಕುಡಿದು ಅಡ್ಡಾದಿಡ್ಡಿ ಕಾರ್ ಚಾಲನೆ : ಬೆಂಗಳೂರಿನಲ್ಲಿ ಸರಣಿ ಅಪಘಾತ

ಕುಡಿದು ಅಡ್ಡಾದಿಡ್ಡಿ ಕಾರ್ ಚಾಲನೆ : ಬೆಂಗಳೂರಿನಲ್ಲಿ ಸರಣಿ ಅಪಘಾತ
X

ಕುಡಿದ ಅಮಲಿನಲ್ಲಿ ಅಡ್ಡಾದಿಡ್ಡಿ ಕಾರ್ ಚಾಲನೆ ಮಾಡಿ ಸರಣಿ ಅಪಘಾತ ನಡೆಸಿರೋ ಘಟನೆ ಬೆಂಗಳೂರಿನಲ್ಲಿ ಕಳೆದ ರಾತ್ರಿ ನಡೆದಿದೆ. ಹನುಮಂತನಗರ 50 ಅಡಿ ರಸ್ತೆಯಲ್ಲಿ ಘಟನೆ ನಡೆದಿದ್ದು,ಅದೃಷ್ಟವಶಾತ್ ಸಣ್ಣ ಪುಟ್ಟ ಗಾಯಗಳಿಂದ ಡ್ರೈವರ್ ಪಾರಾಗಿದ್ದಾನೆ.

ಹಾಸನಾಂಭ ಟ್ರಾವೆಲ್ಸ್‌ಗೆ ಸೇರಿದ ಇನೋವಾ ಕಾರ್ ಅನ್ನ ಅಭಿಷೇಕ್ ಎಂಬ ಚಾಲಕ ಓಡಿಸುತ್ತಿದ್ದ. ಕಳೆದ ರಾತ್ರಿ ಫ್ರೆಂಡ್ಸ್ ಜೊತೆ ಪಾರ್ಟಿ ಮಾಡ್ಕೊಂಡು ಗಿರಿನಗರದ ಕಡೆಯಿಂದ ಹನುಮಂತನಗರ 50 ಅಡಿ ರಸ್ತೆಯಲ್ಲಿ ಓನ್ ವೇನಲ್ಲಿ ಅತೀ ವೇಗವಾಗಿ ಬಂದಿದ್ದಾರೆ. ಈ ವೇಳೆ ಎದುರಿಗೆ ಬರುತ್ತಿದ್ದ ಸ್ವಿಫ್ಟ್‌ ಕಾರಿಗೆ ಮೊದಲು ಡಿಕ್ಕಿ ಹೊಡೆದಿದ್ದಾರೆ. ಬಳಿಕ ಪಕ್ಕದಲ್ಲೇ ನಿಲ್ಲಿಸಿದ್ದ ಆಡೋಗೆ ಡಿಕ್ಕಿ ಹೊಡೆದ ಇನೋವಾ ಬಳಿಕ ಫುಟ್ಪಾತ್‌ಗೆ ಗುದ್ದಿ ನಿಂತಿದೆ. ಡಿಕ್ಕಿಯ ರಭಸಕ್ಕೆ ಕಾರ್ ಆಟೋ , ಇನೋವಾ ಎಲ್ಲವೂ ಸಂಪೂರ್ಣ ಜಖಂ ಆಗಿವೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಗಾಯಾಳುಗಳನ್ನ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಸವನಗುಡಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ನಿರ್ಲಕ್ಷ್ಯ ಚಾಲನೆಅಡಿ ಕೇಸ್ ದಾಖಲಾಗಿದೆ. ಆರೋಪಿ ಡ್ರೈವರ್‌ನನ್ನ ವಶಕ್ಕೆ ಪಡೆದಿರೋ ಪೊಲೀಸ್ರು ವಿಚಾರಣೆ ಮಾಡುತ್ತಿದ್ದಾರೆ.

Next Story

RELATED STORIES