Top

ಓಬಿಸಿ, ದಲಿತರ ವಿರೋಧಿ ಕಾಂಗ್ರೆಸ್: ರಾಯಚೂರಿನಲ್ಲಿ ಮೋದಿ ಟೀಕೆ

ದಲಿತರು, ಶೋಷಿತರು, ಆದಿವಾಸಿಗಳ ಪರ ಕೆಲಸ ಮಾಡಲು ಕಾಂಗ್ರೆಸ್ ಅಡ್ಡಿಪಡಿಸುತ್ತಿದ್ದರೂ ನಮ್ಮ ಕೆಲಸ ಮುಂದುವರಿಸಿದ್ದೇವೆ. ಆದರೆ ಕಾಂಗ್ರೆಸ್​ ಬಡವರು, ದಲಿತರು, ಆದಿವಾಸಿಗಳ ಅಭಿವೃದ್ಧಿ ನೆಪದಲ್ಲಿ ಲೂಟಿ ಮಾಡುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ್ದಾರೆ.

ರಾಯಚೂರಿನಲ್ಲಿ ಬಹಿರಂಗ ಸಮಾವೇಶದಲ್ಲಿ ಮಾತನಾಡಿದ ಮೋದಿ, ಸರಕಾರ ಪೂರ್ಣ ಪ್ರಮಾಣದಲ್ಲಿ ಅಧಿಕಾರಕ್ಕೆ ಬಂದಿದ್ದರೂ ಓಬಿಸಿ ಅಭಿವೃದ್ಧಿಗೆ ಮಸೂದೆ ಜಾರಿಗೆ ಬಾರದಂತೆ ಕಾಂಗ್ರೆಸ್ ರಾಜ್ಯಸಭೆಯಲ್ಲಿ ಅಡ್ಡಗಾಲು ಹಾಕಿದೆ. ಲೋಕಸಭಾ ಅಧಿವೇಶನ ನಡೆಯದಂತೆ ಗಲಾಟೆ ಮಾಡುತ್ತಿದೆ ಎಂದರು.

ಕಾಂಗ್ರೆಸ್ ಅವರ ಅಕ್ರಮ ಅಂಗಡಿಗಳಿಗೆ ಬೀಗ ಹಾಕಿದ್ದೇವೆ. ಹೀಗಾಗಿ ನನ್ನ ವಿರುದ್ಧ ಟೀಕೆ ಮಾಡ್ತಾರೆ. ಸಿಟ್ಟು ಮಾಡಿಕೊಂಡಿದ್ದಾರೆ. ಕರ್ನಾಟಕದಲ್ಲಿ ಕೂಡ ಬಿಜೆಪಿ ಅಧಿಕಾರಕ್ಕೆ ಬರುತ್ತಿದ್ದಂತೆ ಕಾಂಗ್ರೆಸ್ ಅಂಗಡಿಗಳಿಗೆ ಬೀಗ ಹಾಕಲಿದೆ ಎಂದು ಮೋದಿ ನುಡಿದರು.

ಕರ್ನಾಟಕದಲ್ಲಿ ಅಧಿಕಾರದಲ್ಲಿದ್ದಾಗ ಕಾಂಗ್ರೆಸ್ ಸರಕಾರ ತಮ್ಮ ಸಾಧನೆಯನ್ನು ಜನತೆಯ ಮುಂದಿಡಬೇಕಿದೆ. ಜನರಿಗೆ ಲೆಕ್ಕ ಕೊಡಬೇಕಾದ್ದು ಕರ್ತವ್ಯ. ಲೆಕ್ಕ ಕೊಡಲಿಲ್ಲ ಅಂದರೆ ಅವರಿಗೆ ಬುದ್ಧಿ ಹೇಳುವ ಸಮಯ ಬಂದಿದೆ ಎಂದು ಮೋದಿ ಹೇಳಿದರು.

Next Story

RELATED STORIES