Top

ಐಪಿಎಲ್​ನಲ್ಲಿ ಸಂಡೇ ಧಮಾಕಾ

ಐಪಿಎಲ್​​ನಲ್ಲಿ ಇವತ್ತು ಡಬಲ್​ ಧಮಾಕಾ. ಸೂಪರ್​ ಸಂಡೇ ದಿನ ಎರಡು ರೋಚಕ ಹೋರಾಟಗಳಿಗೆ ವೇದಿಕೆ ಸಿದ್ಧವಾಗಿದೆ. ಭಾನುವಾರದ ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್​ ತಂಡ ಕೊಲ್ಕತ್ತಾ ನೈಟ್​ ರೈಡರ್ಸ್​ ತಂಡವನ್ನು ಎದುರಿಸಲಿದೆ. ಮುಂಬೈನ ವಾಂಖೆಡೆ ಮೈದಾನದಲ್ಲಿ ಈ ಪಂದ್ಯ ನಡೆಯಲಿದೆ. ಮುಂಬೈ ಪಾಲಿಗೆ ಇದು ಮಾಡು ಇಲ್ಲವೆ ಮಡಿ ಪಂದ್ಯ. ಕೆಕೆಆರ್​​ ಅಂಕಪಟ್ಟಿಯಲ್ಲಿ ತನ್ನ ಸ್ಥಾನವನ್ನು ಮತ್ತಷ್ಟು ಭದ್ರಪಡಿಸಿಕೊಳ್ಳಲು ಸಿದ್ಧತೆ ಮಾಡಿಕೊಂಡಿದೆ. ರೋಹಿತ್​​ ಶರ್ಮಾ ಮತ್ತು ದಿನೇಶ್​ ಕಾರ್ತಿಕ್​​ ನಾಯಕತ್ವದ ಟೆಸ್ಟ್​​​ ಕೂಡ ನಡೆಯಲಿದೆ.

ದಿನದ 2ನೇ ಪಂದ್ಯದಲ್ಲಿ ಕಿಂಗ್ಸ್​ ಇಲವೆನ್​ ಪಂಜಾಬ್​ ಮತ್ತು ರಾಜಸ್ಥಾನ ರಾಯಲ್ಸ್​ ನಡುವೆ ನಡೆಯಲಿದೆ. ಇಂಧೋರ್​ನಲ್ಲಿ ಈ ಪಂದ್ಯ ನಡೆಯಲಿದೆ. ರಾಜಸ್ಥಾನ ರಾಯಲ್ಸ್​ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನ ಪಡೆದುಕೊಂಡಿದ್ದಾರೆ, ಪಂಜಾಬ್​ ತಂಡ 4ನೇ ಸ್ಥಾನ ಪಡೆದುಕೊಂಡಿದೆ. ಪಂಜಾಬ್​ ಕೂಡ ಪ್ಲೇ-ಆಫ್​​ ಸ್ಥಾನ ಭದ್ರ ಪಡಿಸಿಕೊಳ್ಳಲು ಹೋರಾಟ ನಡೆಸುತ್ತಿದೆ.

Next Story

RELATED STORIES