Top

16 ವರ್ಷದ ಯುವತಿ ಅತ್ಯಾಚಾರ ಮಾಡಿ ಸಜೀವದಹನ ಮಾಡಿದ ದುಷ್ಕರ್ಮಿಗಳು

16 ವರ್ಷದ ಬಾಲಕಿಯ ಮೇಲೆ ಅತ್ಯಾಚರ ಎಸಗಿದ ಐವರು ದುಷ್ಕರ್ಮಿಗಳು ಅವರ ಕುಟುಂಬದ ಸದಸ್ಯರ ಮುಂದೆಯೇ ಸಜೀವದಹನ ದಾರುಣ ಘಟನೆ ಜಾರ್ಖಂಡ್​ನಲ್ಲಿ ಜರುಗಿದೆ.

ಜಾರ್ಖಂಡ್​ನ ಚತ್ರಾ ಜಿಲ್ಲೆಯ ರಾಜತೇಡುವ ಗ್ರಾಮದಲ್ಲಿ ಶುಕ್ರವಾರ ಈ ಹೇಯ ಕೃತ್ಯ ವರದಿಯಾಗಿದೆ. ಸಂಬಂಧಿಕರ ಮದುವೆಗೆಂದು ಹೊರಟ್ಟಿದ್ದ ಯುವತಿ ಕಾಡಿನೊಳಗೆ ಹೋಗುತ್ತಿದ್ದಾಗ ದುಷ್ಕರ್ಮಿಗಳು ಅತ್ಯಾಚಾರ ಎಸಗಿದ್ದಾರೆ. ಸ್ಥಳೀಯ ಪಂಚಾಯತ್ ಮುಂದೆ ಅತ್ಯಾಚಾರ ಎಸಗಿದ್ದನ್ನು ಒಪ್ಪಿಕೊಂಡ ಐವರಿಗೆ 50 ಸಾವಿರ ರೂ. ದಂಡ ವಿಧಿಸಿತ್ತು.

ಇದರಿಂದ ಆಕ್ರೋಶಗೊಂಡ ಯುವಕರು ಯುವತಿಯ ಮನೆಗೆ ನುಗ್ಗಿ ಕುಟುಂಬದ ಸದಸ್ಯರ ಮುಂದೆಯೇ ಬೆಂಕಿ ಹಚ್ಚಿ ಸಜೀವದಹನ ಮಾಡಿದ್ದಾರೆ. ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.

Next Story

RELATED STORIES