Top

ಸಿಎಂ ಸಿದ್ದರಾಮಯ್ಯ ವಿರುದ್ಧ ಹೆಚ್ಡಿಡಿ ಹಿಗ್ಗಾಮುಗ್ಗಾ ವಾಗ್ದಾಳಿ

ಚಿಕ್ಕಮಗಳೂರು:ಸಿಎಂ ಸಿದ್ದರಾಮಯ್ಯನವರೇ ಜೆ.ಹೆಚ್. ಪಟೇಲ್‍ರಿಂದ ಹಿಡಿದು ಜಗದೀಶ್ ಶೆಟ್ಟರ್ ತನಕವೂ ವಿಧಾನಸೌಧದಲ್ಲಿ ಇದ್ದ ನನ್ನ ಫೋಟೋವನ್ನ ಯಾರೂ ತೆಗೆಯಲಿಲ್ಲ. ನೀವು ಬಂದ ಕೂಡಲೇ ಅದನ್ನ ತೆಗೆದು ಎಸೆದರಲ್ಲ ಅದಕ್ಕೆ ಮೋದಿ ನಿಮ್ಮನ್ನ ಉಗಿದದ್ದು, ಓರ್ವ ಕನ್ನಡಿಗ ಪ್ರಧಾನಿಯಾಗಿದ್ದಾರೆ. ನಿಮಗೆ ಅವರನ್ನ ಹೇಗೆ ನಡೆಸಿಕೊಳ್ಳಬೇಕೆಂಬ ಸೌಜನ್ಯವಿಲ್ಲ ಎಂದು ಬೈದದ್ದು ಎಂದು ಸಿಎಂ ವಿರುದ್ಧ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ವಾಗ್ದಾಳಿ ನಡೆಸಿದ್ದಾರೆ. ಚಿಕ್ಕಮಗಳೂರು ಜಿಲ್ಲೆ ಕಡೂರಿನಲ್ಲಿ ಜೆಡಿಎಸ್ ಅಭ್ಯರ್ಥಿ ವೈ.ಎಸ್.ವಿ ದತ್ತ ಪರ ಪ್ರಚಾರಕ್ಕೆ ಬಂದಿದ್ದ ಹೆಚ್.ಡಿ.ದೇವೇಗೌಡರು,ಸಿಎಂ ವಿರುದ್ಧ ಕಿಡಿಕಾರಿದ್ದಾರೆ.ಜೆಡಿಎಸ್ ಗೆ ಓಟ್ ಕೊಟ್ರೆ ಅದು ಬಿಜೆಪಿಗೆ ಹೋಗತ್ತೆ ಅಂದಿದ್ದಾರೆ ಗೌರವಯುತ ಮಹಾನ್ ಮುಖ್ಯಮಂತ್ರಿ. ಅವರು ಹೇಳುವ ಶೈಲಿಯನ್ನ ನಾನು ಮಾಡಿ ತೋರಿಸಬಲ್ಲೆ ಎಂದು ವ್ಯಂಗ್ಯವಾಡಿದ್ದಾರೆ. ಸಿಎಂ ಸಿದ್ದರಾಮಯ್ಯನನ್ನ ರಾಜಕೀಯವಾಗಿ ತಲೆಮೇಲೆ ಹೊತ್ತುಕೊಂಡು ಮೆರೆಸಿದವರು ದೇವೇಗೌಡ. ಈತ ಒಂದು ವ್ಯಕ್ತಿಯಲ್ಲ, ಶಕ್ತಿ ಎಂದು ಊರೂರಿನಲ್ಲಿ ಹೇಳಿಕೊಂಡು ಬಂದೆ. ಆದ್ರೆ, ಅವರು ದೇವೇಗೌಡರಿಗೆ ಬುದ್ಧಿ ಹೇಳಲು ಬರ್ತಾರೆ ಎಂದು ಸಿಎಂ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Next Story

RELATED STORIES