Top

ಸಬ್ ಕಾ ವಿಕಾಸ್ ಅಲ್ಲಾ, ಸಬ್ ಕಾ ಸತ್ಯಾನಾಶ್: ಸಿಎಂ ಸಿದ್ದರಾಮಯ್ಯ

ಸಬ್ ಕಾ ವಿಕಾಸ್ ಅಲ್ಲಾ, ಸಬ್ ಕಾ ಸತ್ಯಾನಾಶ್: ಸಿಎಂ ಸಿದ್ದರಾಮಯ್ಯ
X

ಮೋದಿ ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಎಂದು ಬರೀ ಬಾಯಿಯಲ್ಲಿ ಹೇಳೋದು, ಸಬ್ ಕಾ ಸತ್ಯಾನಾಶ್ ಎಂದು ಬಿಜೆಪಿ ನಾಯಕರಿಗೆ ಸಿಎಂ ಸಿದ್ದರಾಮಯ್ಯ ಟಾಂಗ್ ನೀಡಿದ್ದಾರೆ. ಬಾದಾಮಿಯ ಕಾಳಿದಾಸ ಶಿಕ್ಷಣ ಸಂಸ್ಥೆಯ ಕೊಠಡಿಯಲ್ಲಿ ಅಲ್ಪಸಂಖ್ಯಾತ, ಹಿಂದುಳಿದ ಹಾಗೂ ಹಿಂದುಳಿದ ಸಮುದಾಯಗಳ ಸಭೆ ನಡೆಸಿದರು. ಈ ವೇಳೆ ಮಾತನಾಡಿದ ಅವರು, ಉತ್ತರಕರ್ನಾಟಕ ಭಾಗದ ಗೆಳೆಯರ ಒತ್ತಾಯದ ಮೇರೆಗೆ ನಾನು ಬಾದಾಮಿಯಿಂದ ಸ್ಪರ್ಧಿಸಿರುವೆ. ರೈತರ ಸಾಲಮನ್ನಾ ಸೇರಿದಂತೆ ರಾಜ್ಯ ಸರ್ಕಾರ ಎಲ್ಲ ಸಮುದಾಯದ ಪರವಾಗಿ ಕೆಲಸ ಮಾಡಿದೆ. ಎಲ್ಲ ಹಿಂದುಳಿದ ಸಮುದಾಯಗಳಿಗೆ ನ್ಯಾಯ ಒದಗಿಸಲಿಕ್ಕೆ ಬದ್ಧನಾಗಿದ್ದೇನೆ ಎಂದಿದ್ದಾರೆ. ಅಲ್ಲದೇ ಪ್ರಧಾನಿ ಮೋದಿ ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಎಂದು ಬಾಯಿಯಲ್ಲಿ ಹೇಳೋದು, ಸಬ್ ಕಾ ಸತ್ಯಾನಾಶ್ ಎಂದು ಬಿಜೆಪಿ ನಾಯಕರಿಗೆ ಟಾಂಗ್ ನೀಡಿದ್ದಾರೆ.

ನಮ್ಮ ಪಕ್ಷದಿಂದ ಸಣ್ಣ ಸಣ್ಣ ಸಮುದಾಯಗಳನ್ನು ಹುಡುಕಿ ಟಿಕೆಟ್ ನೀಡಿದ್ದೇನೆ. 5 ವರ್ಷದಲ್ಲಿ ಅಭಿವೃದ್ಧಿ ಕೆಲಸ ಮಾಡಿಕೊಡುತ್ತೇನೆ. ನಾನು ನಿಮ್ಮ ಜೊತೆಗೆ ಇದ್ದೇನೆ. ನನಗೆ ಓಟ್ ಹಾಕಿ ಗೆಲ್ಲಿಸಿ ಎಂದು ಮನವಿ ಮಾಡಿದ್ದಾರೆ.

Next Story

RELATED STORIES