Top

ಸಚಿವ ಹೆಚ್. ಆಂಜನೇಯ ಅಸ್ವಸ್ಥ

ಬಿರು ಬಿಸಿಲಿನಲ್ಲಿ ಪ್ರಚಾರ ನಡೆಸಿದ ವೇಳೆ ಹೆಚ್.ಆಂಜನೇಯ ಅಸ್ವಸ್ಥಗೊಂಡಿದ್ದಾರೆ. ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ಕ್ಷೇತ್ರದಲ್ಲಿ ಸ್ಪರ್ಧಿಸಿರುವ ಆಂಜನೇಯ ಕಾಂಗ್ರೆಸ್ ಪ್ರಚಾರದ ವೇಳೆ ಅಸ್ವಸ್ಥಗೊಂಡಿದ್ದಾರೆ. ಹೊಳಲ್ಕೆರೆ ಕ್ಷೇತ್ರದ ಇಸಮುದ್ರ ಗ್ರಾಮದಲ್ಲಿ ತೆರೆದ ವಾಹನದಲ್ಲಿ ರೋಡ್ ಶೋ ನಡೆಸುವ ವೇಳೆ ನಿಶ್ಯಕ್ತಗೊಂಡ ಆಂಜನೇಯ ತಲೆ ಸುತ್ತು ಬಂದು ಅಸ್ವಸ್ಥಗೊಂಡಿದ್ದು, ದಾವಣಗೆರೆ ನಗರದ ಎಸ್.ಎಸ್.ನಾರಾಯಣ ಹೃದಯಾಲಯಕ್ಕೆ ಅವರನ್ನು ದಾಖಲಿಸಲಾಗಿದೆ. ತಪಾಸಣೆ ನಡೆಸಿದ ವೈದ್ಯರು, ಒಂದು ದಿನ ಅಡ್ಮಿಟ್ ಆಗುವಂತೆ ಸಲಹೆ ನೀಡಿದ್ದಾರೆ.ಇನ್ನೂ ಒಂದು ದಿನ ಆಂಜನೇಯ ಅಬ್ಸರ್ವೇಷನ್ ನಲ್ಲೇ ಉಳಿಯುವಂತೆ ಹೇಳಿದ್ದಾರೆ.ಈ ಕಾರಣದಿಂದ ಕುಟುಂಬಸ್ಥರಲ್ಲಿ, ಕಾರ್ಯಕರ್ತರಲ್ಲಿ ಸದ್ಯ ಆತಂಕ ಮನೆ ಮಾಡಿದೆ.

Next Story

RELATED STORIES