Top

ಶ್ರೀನಗರದಲ್ಲಿ ಮೂರು ಉಗ್ರರ ಎನ್​ಕೌಂಟರ್​

ಶ್ರೀನಗರ: ನಿರ್ಮಾಣ ಹಂತದಲ್ಲಿ ಕಟ್ಟಡದಲ್ಲಿ ಭಾರೀ ಪ್ರಮಾಣದ ಶಸ್ತ್ರಾಸ್ತ್ರದೊಂದಿಗೆ ಅಡಗಿ ಕುಳಿತಿದ್ದ ಮೂವರು ಉಗ್ರರನ್ನು 8 ಗಂಟೆಗಳ ಸುದೀರ್ಘ ಕಾರ್ಯಾಚರಣೆ ನಂತರ ಹತ್ಯೆ ಮಾಡುವಲ್ಲಿ ಯೋಧರು ಯಶಸ್ವಿಯಾಗಿದ್ದಾರೆ.

ಜಮ್ಮು-ಕಾಶ್ಮೀರದ ರಾಜಧಾನಿ ಶ್ರೀನಗರದ ಚಟ್ಟಬಾಲ್​ ಪಟ್ಟಣದಲ್ಲಿ ಮಧ್ಯಾಹ್ನ ನಂತರ ಕಾರ್ಯಾಚರಣೆ ಯಶಸ್ವಿಗೊಂಡಿತು. ಘಟನೆಯಲ್ಲಿ ಮೂವರು ಸಿಆರ್​ಪಿಎಫ್​ ಯೋಧರು ಗಾಯಗೊಂಡಿದ್ದಾರೆ.

ಮುಂಜಾನೆ ಆರಂಭಗೊಂಡ ಲಷ್ಕರೆ ಉಗ್ರರ ತಪಾಸಣೆ ಕಾರ್ಯಾಚರಣೆ ಎನ್​ಕೌಂಟರ್ ಆಗಿ ಬದಲಾಯಿತು. ಮೂವರು ಉಗ್ರರ ದೇಹ ವಶಕ್ಕೆ ಪಡೆದಿದ್ದು, ಮೂರು ಎಕೆ-47 ರಫೈಲ್ ಕೂಡ ಪತ್ತೆಯಾಗಿದೆ.

Next Story

RELATED STORIES