Top

ವಿಧಾನಸಭಾ ಚುನಾವಣೆ: 52 ಶಸ್ತ್ರಾಸ್ತ್ರ ಮುಟ್ಟುಗೋಲು

ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಈವರೆಗೆ ಒಟ್ಟು 97,043 ಶಸ್ತ್ರಾಸ್ತ್ರಗಳ ಪೈಕಿ 97,031 ಶಸ್ತ್ರಾಸ್ತ್ರ ದಾಸ್ತಾನು ಮಾಡಿಕೊಳ್ಳಲಾಗಿದೆ. 52 ಶಸ್ತ್ರಾಸ್ತ್ರಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದ್ದು, 6 ಶಸ್ತ್ರಾಸ್ತ್ರದ ಪರವಾನಿಗೆಯನ್ನು ರದ್ದುಪಡಿಸಲಾಗಿದೆ, ನೀತಿ ಸಂಹಿತೆ ಜಾರಿಯಾದ ನಂತರ 17,842 ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ರಾಜ್ಯ ಮುಖ್ಯ ಚುನಾವಣಾ ಆಯುಕ್ತ ಸಂಜೀವ್ ಕುಮಾರ್ ತಿಳಿಸಿದ್ದಾರೆ.

ಬೆಂಗಳೂರಿನ ವಿಕಾಸಸೌಧದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜನವರಿ 1ರಿಂದ ಈವರೆಗೆ ಒಟ್ಟು 49320 ಪ್ರಕರಣಗಳನ್ನು ಸಿಆರ್ಪಿಸಿ ಕಾಯ್ದೆಯಡಿ ದಾಖಲಿಸಲಾಗಿದೆ. 23070 ವ್ಯಕ್ತಿಗಳಿಂದ ಮುಚ್ಚಳಿಕೆಯನ್ನು ಪಡೆಯಲಾಗಿದೆ. 37901 ಜಾಮೀನು ರಹಿತ ವಾರೆಂಟ್ ಹೊರಡಿಸಲಾಗಿದೆ ಎಂದರು.

1450 ಫ್ಲೈಯಿಂಗ್ ಸ್ಕ್ವಾಡ್, 2000ಕ್ಕೂ ಸ್ಟ್ಯಾಟಿಕ್ ಸರ್ವೆಲ್ಸ್ ಟೀಂ. ಅಕೌಂಟಿಂಗ್ ನೋಡಿಕೊಳ್ಳಲು 240 ಜನ ಇದ್ದಾರೆ. ಗೂಂಡಾ ಆ್ಯಕ್ಟ್ ೩೬ ಕೇಸ್ ದಾಖಲಾಗಿವೆ. 11,263 ಕೇಸ್ ದಾಖಲಾಗಿದೆ. ಮಹಾರಾಷ್ಟ್ರ, ತಮಿಳುನಾಡು, ಕೇರಳ, ಗೋವಾ, ಆಂಧ್ರಪ್ರದೇಶ ಗಡಿಯಲ್ಲಿ ಚೆಕ್ ಪೋಸ್ಟ್ ಬಿಗಿಗೊಳಿಸಲಾಗಿದೆ ಎಂದು ಸಂಜೀವ್ ಕುಮಾರ್ ವಿವರಿಸಿದರು.

56,0002 ಮತಮಗಟ್ಟೆಗಳಲ್ಲಿ ೬೦೦ ಪಿಂಕ್ ಪೋಲಿಂಗ್ ಸ್ಟೇಷನ್ ಸ್ಥಾಪಿಸಲಾಗಿದೆ. ಬೆಳಗಾವಿಯಲ್ಲಿ 50, ಚಿಕ್ಕಬಳ್ಳಾಪುರ ದಲ್ಲಿ ೩೦ ಪಿಂಕ್ ಪೊಲಿಂಗ್ ಸ್ಟೇಷನ್ ಇದೆ. 16 ದಿವ್ಯಾಂಗರ ಪೋಲಿಂಗ್ ಸ್ಟೇಷನ್ ಇದೆ. ಹಿರಿಯ ನಾಗರೀಕರಿಗೂ ಬೂತ ಕನ್ನಡಿ ಸೇರಿದಂತೆ ಎಲ್ಲ ವ್ಯವಸ್ಥೆ ಮಾಡಿದ್ದೇವೆ. 114 ಹೆಲಿಕಾಪ್ಟರ್ ಬಳಕೆಗೆ ಅನುಮತಿ ನೀಡಲಾಗಿದೆ. ಇದರಲ್ಲಿ ಬಿಜೆಪಿ 70, ಜೆಡಿಎಸ್ 18, ಕಾಂಗ್ರೆಸ್ 14 ಹೆಲಿಕಾಪ್ಟರ್ ಳಿಗೆ ಅನುಮತಿ ನೀಡಲಾಗಿದೆ ಎಂದು ಸಂಜೀವ್ ಕುಮಾರ್ ವಿವರಿಸಿದರು.

ರಾಜ್ಯದಲ್ಲಿ 58008 ಮತಗಟ್ಟೆಗಳಿವೆ. 365000. ಚುನಾವಣೆ ಸಿಬ್ಬಂದಿಗಳು ಕಾರ್ಯ ನಿರ್ವಹಿಸಲಿದ್ದು, 12,000 ಅಂಗನವಾಡಿ ಸಿಬ್ಬಂದಿ, 1,15000 ಪೋಲಿಸ್ ಸಿಬ್ಬಂದಿ ಇದ್ದು, ಇದರಲ್ಲಿ 75000 ಮಂದಿ ರಾಜ್ಯ ಪೋಲಿಸ್ ಹಾಗೂ 40000 ಹೊರರಾಜ್ಯದ ಪೋಲಿಸ್ ಸಿಬ್ಬಂದಿಗಳನ್ನು ನೇಮಿಸಲಾಗಿದೆ ಎಂದು ಅವರು ನುಡಿದರು.

Next Story

RELATED STORIES