Top

ರಾಜ್ಯ ಸರಕಾರ ನಿಂದಿಸುವ ಮೊದಲು ಪೆಟ್ರೋಲ್​, ಡೀಸೆಲ್ ಬೆಲೆ ಇಳಿಸಿ

ರಾಜ್ಯ ಸರ್ಕಾರದ ವಿರುದ್ಧ ಸುಳ್ಳು ಆರೋಪಮಾಡುವುದನ್ನ ಬಿಟ್ಟು ಪೆಟ್ರೋಲ್ ಹಾಗೂ ಡಿಸೇಲ್‌ ಬೆಲೆ ಇಳಿಸಿ ಸ್ವಾಮಿ ಎಂದು ಪ್ರಧಾನಿ ಮೋದಿಗೆ ಕೇರಳದ ಮಾಜಿ ಸಿಎಂ ಉಮನ್ ಚಾಂಡಿ ಆಗ್ರಹಿಸಿದ್ದಾರೆ.

ಬೆಂಗಳೂರಿನ‌ ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪೆಟ್ರೋಲಿಯಂ ದರ ಇಳಿದಿದೆ. ಪ್ರತಿ ಬ್ಯಾರಲ್ ದರ 120ಡಾಲರ್​ನಿಂದ ಅರ್ಧದಷ್ಟು ಕುಸಿದಿದೆ. ಹೀಗಿರುವಾಗ ಪೆಟ್ರೋಲ್ ಹಾಗೂ ಡಿಸೇಲ್ ಬೆಲೆಯನ್ನ ಕಡಿಮೆ ಮಾಡುವುದನ್ನ ಬಿಟ್ಟು ಇನ್ನೂ ಏರಿಕೆಮಾಡುತ್ತಿದ್ದೀರಲ್ಲಾ ಇದು ನ್ಯಾಯವೇ? ಅಂತ ವ್ಯಂಗಿಸಿದ್ದಾರೆ.

ರಾಜ್ಯ ಸರ್ಕಾರ ಹನಿ ನೀರಾವರಿ ಮೂಲಕ ರೈತರಿಗೆ ನೆರವಾಗಿದೆ, ವಿಶ್ವದ ಸೋಲಾರ್ ಪಾರ್ಕ್ ಅನ್ನ ನಿರ್ಮಿಸಿ ವಿದ್ಯುತ್ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾದಿಸಲು ಹೊರಟಿದೆ ಹೀಗಿರುವಾಗ ನೀವು ಸಿಎಂ,ಸರ್ಕಾರದ ವಿರುದ್ಧ ಸುಳ್ಳು ಆರೋಪ ಮಾಡುವುದು ಸರಿಯೇ ಅಂತ ಪ್ರಶ್ನೆಸಿದ್ದಾರೆ.

ಇದೇ ವೇಳೆ ಮಾತನಾಡಿದ ಮಾಜಿ ಕೇಂದ್ರ ಸಚಿವ ಶಶಿ ತರೂರ್​, ದೇಶದಲ್ಲಿ ಪ್ರಧಾನಿ ಮೋದಿ ವರ್ಚಸ್ಸು ಕುಗ್ಗುತ್ತಿದೆ. ದೇಶದಲ್ಲಿ ನೈತಿಕ ಪೊಲೀಸ್​ಗಿರಿ, ಅಸಹಿಷ್ಣುತೆ ಹೆಚ್ಚಿದೆ. ಮಹಿಳೆಯರು, ಮಕ್ಕಳ ಮೇಲಿನ ದೌರ್ಜನ್ಯ ಹೆಚ್ಚಾಗಿದೆ. ಹೀಗಿದ್ದರೂ ಕೇಂದ್ರ ಸರ್ಕಾರ ಅದನ್ನ ತಡೆಯುವಲ್ಲಿ‌ ವಿಫಲವಾಗಿದೆ ಎಂದು ಆರೋಪಿಸಿದ್ದಾರೆ.

ಕರ್ನಾಟಕದಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮಹಿಳೆಯರು ಮಕ್ಕಳ ರಕ್ಷಣೆಗೆ ಆಧ್ಯತೆ ನೀಡಿದೆ,ರೈತರ ಸಮಸ್ಯೆಗಳಿಗೆ ಸ್ಪಂದಿಸಿದೆ,ಇಂದಿರಾ ಕ್ಯಾಂಟೀನ್ ಸೇರಿ ಹಲವು ಯೋಜನೆಗಳನ್ನ ಜಾರಿಗೆ ತಂದು ಜನಪರ ನಿಲುವು ತಳೆದಿದೆ ಹೀಗಾಗಿ ಪ್ರಧಾನಿ ಮೋದಿ ವರ್ಚಸ್ಸು ಕುಗ್ಗಿ, ಸಿಎಂ ಸಿದ್ದರಾಮಯ್ಯ ವರ್ಚಸ್ಸು ಹೆಚ್ಚುತ್ತಿದೆ ಅಂತ ಹೇಳಿದ್ದಾರೆ.

ಅಲ್ಲದೆ ಬಿಜೆಪಿ ಅಡಳಿತದಲ್ಲಿ ಮಹಿಳೆಯರ ಡ್ರೆಸ್ ಕೋಡ್ ಬಗ್ಗೆ ಚರ್ಚೆಯಾಗುತ್ತಿದೆ,ರೆಸ್ಟೋರೆಂಟ್ ನಲ್ಲಿ ಬೀಫ್ ತಿಂದ್ರು ಅಂತ ಅಟ್ಯಾಕ್ ಮಾಡುವ ಸಂಸ್ಕೃತಿ ಹೆಚ್ಚಾಗುತ್ತಿದೆ ಅಂತ ಕೇಂದ್ರ ಸರ್ಕಾರದ ವಿರುದ್ಧ ಆರೋಪ ಮಾಡಿದ್ದಾರೆ.

Next Story

RELATED STORIES