Top

ಮೋದಿ ನಾಟಕದ ಮುಂದೆ ಪ್ರಕಾಶ್ ರೈ ಏನೇನೂ ಅಲ್ಲ: ಜಿಗ್ನೇಶ್

ಪ್ರಧಾನಿ ನರೇಂದ್ರ ಮೋದಿ ಅವರ ಎನ್ಎಸ್​ಡಿಯ ನಾಟ್ಯ ಕಲಾವಿದರ ಮುಂದೆ ಪ್ರಕಾಶ ರೈ ಏನೂ ಅಲ್ಲ. ಮೋದಿ ನಾಟಕ ಬಂದ್ ಮಾಡಿ ಬಡವರಿಗೆ ಹಾಗೂ ದಲಿತರಿಗೆ ಊಟ ದೊರೆಯುವಂತೆ ಮಾಡಬೇಕು ಎಂದು ಗುಜರಾತ್ ಶಾಸಕ ಹಾಗೂ ಸಾಮಾಜಿಕ ಹೋರಾಟಗಾರ ಜಿಗ್ನೇಶ್ ಮೆವಾನಿ ಹೇಳಿದ್ದಾರೆ.

ರಾಯಚೂರಿನಲ್ಲಿ ಸಂವಿಧಾನ ಉಳಿವಿಗಾಗಿ ಕರ್ನಾಟಕ ಸಂಘಟನೆಯಿಂದ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೋಮುವಾದಿ, ಸರ್ವಾಧಿಕಾರಿ ಸಂವಿದಾನ ವಿರೋಧಿ ಬಿಜೆಪಿ ಸೋಲಿಸಿ ಎಂದು ಕರೆ ನೀಡಿದರು.

ಮೋದಿಗೆ ಈಗ ದಲಿತರ ಬಗ್ಗೆ ಪ್ರೇಮವಾಗಿದೆ. ಗುಜರಾತ್ ದಲಿತರ ಮೇಲೆ ದೌರ್ಜನ್ಯ ನಡೆದಾಗ ಮೋದಿ ಹಾಗು ಬಿಜೆಪಿ ಮುಖಂಡರು ಎಲ್ಲಿಗೆ ಹೋಗಿದ್ದರು? ಕರ್ನಾಟಕ ಚುನಾವಣೆ ಬಂದಾಗ ದಲಿತರ ಮನೆಯಲ್ಲಿ ಊಟ ಮಾಡುತ್ತಿದ್ದಾರೆ. ಸಫಾಯಿ ಕರ್ಮಚಾರಿ ಕೆಲಸ ಮಾಡುವುದನ್ನು ಬಿಡಿಸಲು ಟೆಕ್ನಾಲಾಜಿ ತೆಗೆದುಕೊಂಡು ಬನ್ನಿ. ರೋಹಿತ್ ವೇಮಲು ಹತ್ಯೆ ಮಾಡುತ್ತಿರಿ, ಈಗ ನಾಟಕ ಮಾಡುತ್ತೀರಿ, ನೀವು ಮನುವಾದಿ ಎಂದು ಜಿಗ್ನೇಶ್ ಹೇಳಿದರು.

ಪ್ರಧಾನಿ ಮಂತ್ರಿ ಮೋದಿ ನಾಲ್ಕು ವರ್ಷ ಬ್ಯಾಂಕುಗಳ ಕೊಳ್ಳೆ ಹೊಡೆದಿದ್ದಾರೆ. ನೀವು ಚೌಕಿದಾರವಲ್ಲ ದೇಶದ ನಂಬರ್ 1 ಕಳ್ಳ. ಮೋದಿ ಅಂಬೇಡ್ಕರ್​ ಭಕ್ತ ಎಂದು ಹೇಳುತ್ತೀರಿ. ಆದರೆ ಜಾತಿ ನಿಂದನೆ ಕಾಯ್ದೆ ತಿದ್ದುಪಡಿ ತರುತ್ತಿರಿ. ದೇಶದ ಅಂಬೇಡ್ಕರವಾದಿ ಚಂದ್ರಶೇಖರ ರಾಮಲ್ ಯೋಗಿ ಸರಕಾರ ಜೈಲಿಗೆ ಅಟ್ಟಿದೆ. ಯೋಗಿ ಆದಿತ್ಯನಾಥ ಹಾಗು ಮೋದಿಯವರಿಗೆ ದಲಿತರ ಮೇಲೆ ಯಾಕೆ ದ್ವೇಷವಿದೆ. ನಾಲ್ಕು ವರ್ಷದಲ್ಲಿ ಭ್ರಷ್ಟಾಚಾರ ತಡೆಯಲು ಏನು ಮಾಡಿದ್ದೀರಿ. ಇಲ್ಲಿಯ ಹಣವನ್ನು ನೀರವ ಮೋದಿ ಹಾಗು ಮಲ್ಯ ಹಣ ತೆಗೆದುಕೊಂಡು ಹೋಗುವಂತೆ ಮಾಡಿದಿರಿ. ಬ್ಯಾಂಕಗಳ ಖಾತೆಯಲ್ಲಿ ೧೫ ಲಕ್ಷ ರೂಪಾಯಿ ಹಾಕುತ್ತೇನೆ ಎಂದಿದ್ದೀರಿ ಆದರೆ ೧೫ ರೂಪಾಯಿ ಬರಲಿಲ್ಲ. ಆದರೆ ನೀರವ ಮೋದಿ ಜೇಬಿಗೆ ಹಣ ಹೋಗಿದೆ. ನೀರವ ಮೋದಿ ಹಾಗು ವಿಜಯಮಲ್ಯ ಹೊಡೆದುಕೊಂಡು ಹೋಗಿರುವ ೯ ಸಾವಿರ ಕೋಟಿ ಹಣ ವಾಪಸ್ಸು ತೆಗೆದುಕೊಂಡು ಬನ್ನಿ ಎಂದು ಜಿಗ್ನೇಶ್ ವಿವರಿಸಿದರು.

Next Story

RELATED STORIES