Top

ಮೋದಿಗೆ ಕೊನೆಗೂ ನೆನಪಾಯ್ತು ಮಹದಾಯಿ..!

ಮೋದಿಗೆ ಕೊನೆಗೂ ನೆನಪಾಯ್ತು ಮಹದಾಯಿ..!
X

ಗದಗ : ಮಹದಾಯಿ ನೀರು ಹಂಚಿಕೆ ಕುರಿತು ಈವರೆಗೆ ತುಟಿ ಬಿಚ್ಚದ ಪ್ರಧಾನಿ ನರೇಂದ್ರ ಮೋದಿ, ಚುನಾವಣೆ ಬರ್ತಿದ್ದಂತೆ ಕೊನೆಗೂ ಮೌನ ಮುರಿದಿದ್ದಾರೆ.. ಗದಗ್​​ನಲ್ಲಿ ನಡೆದ ಚುನಾವಣಾ ಱಲಿಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಮಾತುಕತೆ ಮೂಲಕ ನಾವು ಸಮಸ್ಯೆ ಪರಿಹಾರಕ್ಕೆ ಸಿದ್ಧ ಎಂದಿದ್ದಾರೆ. ಮಹದಾಯಿ ವಿವಾದ ಟ್ರಿಬ್ಯೂನಲ್‌ಗೆ ಸೇರಿಸಿದ್ದೇ ಸೋನಿಯಾ ಗಾಂಧಿ ಎಂದು ಕಾಂಗ್ರೆಸ್​ ವಿರುದ್ಧ ಮೋದಿ ಕಿಡಿಕಾರಿದರು. ಕರ್ನಾಟಕಕ್ಕೆ ಒಂದು ಹನಿ ನೀರು ಕೊಡಲ್ಲ ಎಂದು ಗೋವಾದ ಮಡ್​​ಗಾಂವ್​​ನಲ್ಲಿ ಸೋನಿಯಾ ಗಾಂಧಿ ಮಾತು ಕೊಟ್ಟಿದ್ದರು ಎಂದು ಮೋದಿ ಆರೋಪಿಸಿದ್ರು.

ನೀರು ಪ್ರತಿಯೊಬ್ಬರಿಗೂ ಬಹಳ ಮಹತ್ವಪೂರ್ಣವಾದದ್ದು. ಹೀಗಾಗಿ ನಾವು ಮಹದಾಯಿ ಸಮಸ್ಯೆ ಪರಿಹಾರಕ್ಕೆ ಸಿದ್ಧರಿದ್ದೇವೆ ಎಂದು ಗದಗ ಸಮಾವೇಶದಲ್ಲಿ ಮೋದಿ ಹೇಳಿದ್ರು. ಆದ್ರೆ, ಮಹದಾಯಿ ನೀರಿಗಾಗಿ ಸುಮಾರು ವರ್ಷಗಳಿಂದ ರೈತರು ಪ್ರತಿಭಟನೆ ನಡೆಸ್ತಿದ್ದಾರೆ. ಹಲವು ಬಾರಿ ಕರ್ನಾಟಕ ಬಂದ್ ಕೂಡ ಆಗಿದೆ. ಇಷ್ಟಾದ್ರೂ, ಈವರೆಗೆ ಮಹದಾಯಿ ಬಗ್ಗೆ ಮೋದಿ ಮಾತನ್ನೇ ಆಡಿರಲಿಲ್ಲ. ಆದ್ರೀಗ, ಕರ್ನಾಟಕ ಚುನಾವಣೆ ಸಮೀಪಿಸ್ತಿದ್ದಂತೆ ಪ್ರಧಾನಿ ಮೋದಿಗೆ ಮಹದಾಯಿ ನೆನಪಾದಂತಿದೆ.

Next Story

RELATED STORIES