Top

ಮತ್ತೊಮ್ಮೆ ಎಕ್ಸ್​ಕ್ಯೂಸ್​ಮಿ ಅಂತಿದ್ದಾರೆ ಸುನೀಲ್​ ರಾವ್​

ಮತ್ತೊಮ್ಮೆ ಎಕ್ಸ್​ಕ್ಯೂಸ್​ಮಿ ಅಂತಿದ್ದಾರೆ ಸುನೀಲ್​ ರಾವ್​
X

​ಎಕ್ಸ್​ಕ್ಯೂಸ್​ಮಿ ಚಿತ್ರದ ನಾಯಕ ಸುನೀಲ್​ ರಾವ್​ ಎಂಟು ವರ್ಷಗಳ ನಂತ್ರ ಮತ್ತೆ ನಾಯಕನಾಗಿ ಬಣ್ಣ ಹಚ್ಚುತ್ತಿರೋದು ಗೊತ್ತೇಯಿದೆ..ಚಿತ್ರಕ್ಕೆ ತುರ್ತು ನಿರ್ಗಮನ ಅಂತ ಬಹುದಿನಗಳ ಹಿಂದೆಯೇ ಟೈಟಲ್​ ಫಿಕ್ಸ್​ ಆಗಿದೆ .. ಚಿತ್ರೀಕರಣ ಶುರು ಆಗುವ ಮುನ್ನವೇ ಚಿತ್ರದ ವಿಭಿನ್ನವಾದ ಟೀಸರ್ ಬಿಡುಗಡೆ ಮಾಡಿ ಪ್ರೇಕ್ಷಕರ ಗಮನ ಸೆಳೆದಿತ್ತು ಚಿತ್ರತಂಡ.

ಇದೀಗ ಚಿತ್ರದಲ್ಲಿ ಐವರು ನಾಯಕಿಯರಿಗೆ ಮುಖ್ಯ ಪಾತ್ರದಲ್ಲಿ ಅಭಿನಯಿಸಲು ಅವಕಾಶ ನೀಡಿದ್ದಾರೆ ನಿರ್ದೇಶಕ ಹೇಮಂತ್ ಕುಮಾರ್.ಸಂಯುಕ್ತ ಹೆಗ್ಡೆ, ಸುಧಾರಾಣಿ, ಅರುಣಾ ಬಾಲ್ ರಾಜ್, ಹಿತಾ ಚಂದ್ರಶೇಖರ್ ಹಾಗೂ ಅಮೃತಾ ಸಿನಿಮಾದಲ್ಲಿ ಅಭಿನಯ ಮಾಡಿದ್ದಾರೆ. ಸದ್ದಿಲ್ಲದೇ ಸದ್ಯ ಚಿತ್ರೀಕರಣ ಮುಗಿಸಿರುವ ತಂಡ ಪೋಸ್ಟ್ ಪ್ರೊಡಕ್ಷನ್ ನಲ್ಲಿ ಬ್ಯುಸಿ ಆಗಿದ್ದಾರೆ.

ಆಗಸ್ಟ್​ನಲ್ಲಿ ಸಿನಿಮಾ ರಿಲೀಸ್ ಮಾಡುವ ಪ್ಲಾನ್​ನಲ್ಲಿದೆ ಚಿತ್ರತಂಡ.. ಮಲಯಾಳಂನ ಖ್ಯಾತ ಸಂಕಲನಕಾರ ಬಿ. ಅಜಿತ್​ಕುಮಾರ್ ಈ ಚಿತ್ರಕ್ಕೆ ಸಂಕಲನ ಮಾಡುತ್ತಿದ್ದಾರೆ. ಛಾಯಾಗ್ರಹಣ ಪ್ರಯಾಗ್ ಮುಕುಂದನ್ ಅವರದು. ಹೇಮಂತ್ ಹಾಗೂ ಭರತ್ ಕುಮಾರ್ ಜಂಟಿಯಾಗಿ ಸಿನಿಮಾವನ್ನ ನಿರ್ಮಾಣ ಮಾಡುತ್ತಿದ್ದಾರೆ.

Next Story

RELATED STORIES