Top

ಬಿಹಾರ ಸ್ವಚ್ಛಭಾರತ ಜಾಹಿರಾತಿನಲ್ಲಿ ಪಾಕಿಸ್ತಾನದ ಬಾಲಕಿಯರು!

ಬಿಹಾರದಲ್ಲಿ ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಸ್ವಚ್ಛಭಾರತ್ ಯೋಜನೆ ಕುರಿತು ಪ್ರಚಾರಕ್ಕಾಗಿ ಮುದ್ರಿಸಿದ್ದ ಬುಕ್​ಲೆಟ್​ನ ಮುಖಪುಟದಲ್ಲಿ ಪಾಕಿಸ್ತಾನ ಬಾಲಕಿಯರ ಫೋಟೋ ಪ್ರಕಟಗೊಂಡಿದ್ದು, ವ್ಯಾಪಕ ಟೀಕೆಗೆ ಗುರಿಯಾಗಿದೆ.

ಬಿಹಾರದ ರಾಜಧಾನಿ ಪಾಟ್ನಾದಿಂದ 150 ಕಿ.ಮೀ. ದೂರದಲ್ಲಿರುವ ಜಮುಲ್​ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಕಾರ್ಯಕ್ರಮದ ರಾಯಭಾರಿ ಎಂದು ಪ್ರಚಾರಕ್ಕಾಗಿ ಮುದ್ರಿಸಿದ ಪುಸ್ತಕದ ಮುಖಪುಟದಲ್ಲಿ ಇದ್ದ ಬಾಲಕಿಯ ಫೋಟೋ ಪಾಕಿಸ್ತಾನದವಳಾಗಿದ್ದಾಳೆ. ಅಲ್ಲದೇ ಪಾಕಿಸ್ತಾನದ ಧ್ವಜವನ್ನು ನಗುಮುಖದಿಂದ ಹಾರಾಡಿಸುತ್ತಿರುವುದು ಕಂಡು ಬಂದಿದ್ದು, ಈ ಚಿತ್ರ ಈ ವೃರಲ್ ಆಗಿದೆ.

Next Story

RELATED STORIES