Top

ಬಿಜೆಪಿ ವಿರುದ್ಧ ಮುತಾಲಿಕ್ ವಾಗ್ದಾಳಿ

ಆನೇಕಲ್:ಬಿಜೆಪಿ ಚುನಾವಣೆಯಲ್ಲಿ ಓಟ್ ಬ್ಯಾಂಕ್ ರಾಜಕಾರಣ ಮಾಡುತ್ತಿದೆ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿ ಕಾರ್ಯವೈಖರಿ ವಿರುದ್ದ ಕಿಡಿ ಕಾರಿದ ಮುತಾಲಿಕ್‌, ಹಿಂದೂಗಳ ಹೆಸರಿನಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿದೆ. ಜೈಲಿಗೆ ಹೋಗಿ ಬಂದಿರುವ ಯಡಿಯೂರಪ್ಪರಿಂದ ಯಾವ ರೀತಿ ಭ್ರಷ್ಟಾಚಾರ‌ ಮುಕ್ತ ಸರ್ಕಾರವನ್ನ ನಿರೀಕ್ಷೆ ಮಾಡಬಹುದು. ಸದನದಲ್ಲಿ ಬ್ಲೂ ಫಿಲಂ ನೋಡಿದವರು ಇನ್ನೂ ಬಿಜೆಪಿಯಲ್ಲಿಯೇ ಇದ್ದಾರೆ.ರಾಜ್ಯದಲ್ಲಿ ಹಿಂದೂ‌ ನಾಯಕರ ಸರಣಿ ಕೊಲೆಗಳಾಗುತ್ತಿದೆ.ಆದರೆ ಇದುವರೆಗೂ ತಪಿತಸ್ಥರನ್ನ ಬಂಧಿಸುವ ಕೆಲಸ ಆಗಿಲ್ಲ.ಹಿಂದುತ್ವದ ಹೆಸರಿನಲ್ಲಿ ಓಟ್ ಗಾಗಿ ಬಿಜೆಪಿ ನಾಟಕವಾಡುತ್ತಿದೆ ಎಂದು ಮುತಾಲಿಕ್ ಕಿಡಿ ಕಾರಿದ್ದಾರೆ.ಮುಂದಿನ ಚುನಾವಣೆಯಲ್ಲಿ ಜನ ಬಿಜೆಪಿ ಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಕಿಡಿಕಾರಿದ್ದಾರೆ.

Next Story

RELATED STORIES