Top

ಪ್ರೇಮ್​ಗೆ ಹಾಕಿದ್ದ ಚಾಲೆಂಜ್​ ನಲ್ಲಿ ಗೆದ್ದ ಕಿಚ್ಚ

ಪ್ರೇಮ್​ಗೆ ಹಾಕಿದ್ದ ಚಾಲೆಂಜ್​ ನಲ್ಲಿ ಗೆದ್ದ ಕಿಚ್ಚ
X

ಸ್ಯಾಂಡಲ್​ವುಡ್​ನ ಮೋಸ್ಟ್ ಎಕ್ಸ್​ಪೆಕ್ಟೆಡ್​ ಸಿನಿಮಾ ದಿ ವಿಲನ್​.ಹ್ಯಾಟ್ರಿಕ್​ ಹೀರೋ ಶಿವರಾಜ್​ಕುಮಾರ್​ ಮತ್ತು ಕಿಚ್ಚ ಸುದೀಪ್​ ಕಾಂಬಿನೇಷನ್​ನಲ್ಲಿ ಬರ್ತಿರೋ ಬಹು ನಿರೀಕ್ಷೆಯ ಚಿತ್ರ..ಆದ್ರೆ ಅದ್ಯಾಕೋ ದಿ ವಿಲನ್​ ಚಿತ್ರದ ಚಿತ್ರೀಕರಣ ಮಾತ್ರ ಮುಗಿಯೋಕ್ಕೆ ತಯಾರಿಲ್ಲ.ಇದೇ ಗ್ಯಾಪ್​ನಲ್ಲಿ ಕಿಚ್ಚ ಸುದೀಪ್​ ಅಂಬಿ ನಿಂಗೆ ವಯಸ್ಸಾಯ್ತೋ ಪ್ರಾಜೆಕ್ಟನ್ನ ಕೈಗೆತ್ತಿಕೊಂಡಿದ್ದು ಗೊತ್ತೇಯಿದೆ.

ದಿ ವಿಲನ್​ ಸಿನಿಮಾ ಶೂಟಿಂಗ್​ ನಡೆಯುವಾಗ ಕಿಚ್ಚ ಸುದೀಪ್​ ನಿರ್ದೇಶಕ ಪ್ರೇಮ್​ಗೆ ಒಂದು ಮಾತನ್ನ ಹೇಳಿದ್ದರಂತೆ..ದಿ ವಿಲನ್​ ಸಿನಿಮಾ ಶೂಟಿಂಗ್​ ಮುಗಿಸಿ ಚಿತ್ರ ರಿಲೀಸ್​ ಆಗೋದ್ರೊಳಗೆ ಅಂಬಿ ನಿಂಗೆ ಸಿನಿಮಾ ಶೂಟಿಂಗ್​ ಕಂಪ್ಲೀಟ್​ ಆಗಿ ಚಿತ್ರ ಬಿಡುಗಡೆ ಕೂಡ ಮಾಡಿಬಿಡ್ತಿನಿ ಅಂತ..ಇದು ಕೇವಲ ಪ್ರೇಮ್​ ಕಾಲೆಳೆಯೋಕ್ಕೆ ಆಡಿದ ಮಾತಾದರೂ ಇದೀಗ ಕಿಚ್ಚನ ಈ ಮಾತು ಸತ್ಯ ಆಗಿದೆ.

ದಿ ವಿಲನ್​ ಸಿನಿಮಾದ ಡಬ್ಬಿಂಗ್​ ಕೆಲಸ ಈಗಷ್ಟೇ ಶುರುವಾಗಿದ್ದು, ಈಗಾಗ್ಲೇ ಅಂಬಿ ನಿಂಗೆ ವಯಸ್ಸಾಯ್ತೋ ಚಿತ್ರದ ಶೂಟಿಂಗ್​ ಮುಕ್ತಾಯದ ಹಂತಕ್ಕೆ ಬಂದಿದೆ..ಈ ಬೆಳವಣಿಗೆ ನೋಡ್ತಾ ಇದ್ರೆ, ದಿ.ವಿಲನ್​ ಚಿತ್ರಕ್ಕೂ ಮೊದಲೇ ಅಂಬಿ ನಿಂಗೆ ವಯಸ್ಸಾಯ್ತೋ ಸಿನಿಮಾನೇ ಮೊದಲು ತೆರೆಗೆ ಬರೋ ಸೂಚನೆ ಸಿಗ್ತಿದೆ.ಹಾಗೇನಾದ್ರೂ ಆದ್ರೆ ಕಿಚ್ಚ ಸವಾಲನ್ನ ಗೆದ್ದಂತಾಗುತ್ತದೆ.ಅಂದ ಹಾಗೇ ದಿ.ವಿಲನ್​ ಚಿತ್ರವನ್ನ ನಿರ್ದೇಶಕ ಪ್ರೇಮ್​ ವರಮಹಾಲಕ್ಷ್ಮಿ ಹಬ್ಬಕ್ಕೆ ತೆರೆಗೆ ತರೋ ಯೋಚನೆಯಲ್ಲಿದ್ದಾರೆ.

Next Story

RELATED STORIES