Top

ಮೊದಲ ದಿನದ ಪ್ರಚಾರದಲ್ಲೇ ನಟ ದರ್ಶನ್ ಗೆ ವಿಘ್ನ..!

ಸಿಎಂ ಸಿದ್ದರಾಮಯ್ಯ ಪರ ಚಾಲೆಂಜಿಂಗ್ ಸ್ಟಾರ್ ದರ್ಶನ್ ಪ್ರಚಾರ ಮಾಡಲು ಕಣಕ್ಕಿಳಿದಿದ್ದಾರೆ. ಆದರೆ ಪ್ರಚಾರದ ಮೊದಲ ದಿನವೇ ದರ್ಶನ ಗೆ ವಿಘ್ನ ಎದುರಾದ ಹಾಗಿದೆ. ಮೈಸೂರಿನ ನಾಗನಹಳ್ಳಿ ಗ್ರಾಮದಲ್ಲಿ ಸಿಎಂ ಪರ ಪ್ರಚಾರ ಮಾಡಲು ಮುಂದಾದಾಗ ನಟ ದರ್ಶನ್ ಗೆ ಪ್ರತಿಭಟನೆ ಬಿಸಿ ತಟ್ಟಿದೆ. ಜೆಡಿಎಸ್ ಕಾರ್ಯಕರ್ತರು, ಕಾಂಗ್ರೆಸ್ ಪರ ಪ್ರಚಾರ ಮಾಡುವುದು ಬೇಡ. ಹಾಗಿದ್ದ್ಲಲ್ಲಿ ನೀವು ನಮ್ಮೂರಿಗೆ ಬರಬೇಡಿ ಎಂದು ಕಾಂಗ್ರೆಸ್ ಮತ್ತು ದರ್ಶನ್ ವಿರುದ್ಧ ಜೆಡಿಎಸ್ ಕಾರ್ಯಕರ್ತರು ಧಿಕ್ಕಾರ ಕೂಗಿದ್ದಾರೆ. ಆದರೆ ಎಲ್ಲ ವಿರೋಧದ ನಡುವೆಯೂ ದರ್ಶನ್ ಪ್ರಚಾರ ಮುಂದುವರೆಸಿದ್ದಾರೆ. ಹಸಿರು ಶಾಲು ಹೊದ್ದ ಜಗ್ಗುದಾದಾ ಕಾಂಗ್ರೆಸ್ ಪರ ಭರ್ಜರಿ ಕ್ಯಾಂಪೇನ್ ನಡೆಸಿದ್ದಾರೆ.ದಚ್ಚು ಅಭಿಮಾನಿಗಳು ನೆಚ್ಚಿನ ನಟನ ಕೈ ಕುಲುಕಲು ಮುಗಿಬಿದ್ದಿದ್ದಾರೆ.

Next Story

RELATED STORIES