Top

ಪಿರಿಯಾಪಟ್ಟಣದಲ್ಲಿ ಅಮಿತ್ ಷಾ ರೋಡ್ ಶೋ

ಪಿರಿಯಾಪಟ್ಟಣದಲ್ಲಿ ಅಮಿತ್ ಷಾ ಭರ್ಜರಿ ರೋಡ್ ಶೋ ನಡೆಸಿದ್ರು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು

ತೆರೆದ ವಾಹನದಲ್ಲಿ ರೋಡ್ ಶೋ ನಡೆಸಿ ಮತ ಬೇಟೆ ನಡೆಸಿದ್ರು. ಮೈಸೂರು- ಕೊಡಗು ಮುಖ್ಯರಸ್ತೆಯಲ್ಲಿ ನಡೆದ ರೋಡ್ ಶೋನಲ್ಲಿ ಸಾವಿರಾರು ಕಾರ್ಯಕರ್ತರು ಭಾಗಿಯಾಗಿದ್ರು.

ರಸ್ತೆಯುದ್ದಕ್ಕೂ ಹೂವು ಎರಚಿ ಸಂಭ್ರಮಿಸಿದ ಕಾರ್ಯಕರ್ತರು ಜೈಕಾರಗಳನ್ನು ಹಾಕಿದ್ರು.

ಎಪಿಎಂಸಿ ಯಾರ್ಡ್ ನಿಂದ ಬೆಟ್ಟದಪುರ ವೃತ್ತದವರೆಗೆ ರೋಡ್ ಶೋ ನಡೆಸಿದ ಬಿಜೆಪಿ ಈ ಬಾರಿ ಗೆಲುವಿನ ಕನಸು ಕಾಣ್ತಿದ್ದಾರೆ. ಬಿಜೆಪಿ ಪ್ರಚಾರ ಯಾತ್ರೆಯಲ್ಲಿ ಡೊಳ್ಳು, ತಮಟೆ- ನಗಾರಿ, ಕಂಸಾಳೆ ಸೇರಿದಂತೆ ಅನೇಕ ಕಲಾ ತಂಡಗಳು ಪಾಲ್ಗೊಂಡಿದ್ದವು .

ಅಮಿತ್ ಷಾ ಜೊತೆಗೆ ಸಂಸದ ಪ್ರತಾಪ್ ಸಿಂಹ, ಪಿರಿಯಾಪಟ್ಟಣದ ಅಭ್ಯರ್ಥಿ ಎಸ್.ಮಂಜುನಾಥ್ ಸೇರಿದಂತೆ ಹಲವು ಮುಖಂಡರು ಭಾಗಿಯಾಗಿದ್ದರು.

Next Story

RELATED STORIES