Top

ಪಂಜಾಬ್​ಗೆ ಪಂಚ್​: ಮುಂಬೈ ಆಸೆ ಜೀವಂತ

ಸರ್ವಾಂಗೀಣ ಪ್ರದರ್ಶನ ನೀಡಿದ ಮುಂಬೈ ಇಂಡಿಯನ್ಸ್ 6 ವಿಕೆಟ್​ಗಳಿಂದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವನ್ನು ಅದರದ್ದೇ ತವರಿನಲ್ಲಿ ಮಣಿಸಿದ ಮುಂಬೈ ಇಂಡಿಯನ್ಸ್ ಐಪಿಎಲ್ ಟಿ-20 ಕ್ರಿಕೆಟ್ ಟೂರ್ನಿಯಲ್ಲಿ ನಾಕೌಟ್​ ಹಂತ ಪ್ರವೇಶಿಸುವ ಆಸೆ ಜೀವಂತವಾಗಿರಿಸಿಕೊಂಡಿದೆ.

ಶುಕ್ರವಾರ ತಡರಾತ್ರಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಂಜಾಬ್ ಕ್ರಿಸ್ ಗೇಲ್ ಅವರ ಅರ್ಧಶತಕದ ನೆರವಿನಿಂದ 20 ಓವರ್ ಗಳಲ್ಲಿ 6 ವಿಕೆಟ್​ಗೆ 174 ರನ್ ಕಲೆ ಹಾಕಿತು. ಸ್ಪರ್ಧಾತ್ಮಕ ಗುರಿ ಬೆಂಬತ್ತಿದ ಮುಂಬೈ ಇಂಡಿಯನ್ಸ್ ಒಂದು ಓವರ್ ಬಾಕಿ ಇರುವಂತೆಯೇ 4 ವಿಕೆಟ್ ಕಳೆದುಕೊಂಡು ಜಯಭೇರಿ ಬಾರಿಸಿತು.

ಈ ಗೆಲುವಿನ ಮೂಲಕ ಮುಂಬೈ 9 ಪಂದ್ಯಗಳಿಂದ 3 ಜಯದೊಂದಿಗೆ 6 ಅಂಕ ಕಲೆ ಹಾಕಿದ್ದು, ನಾಕೌಟ್ ಹಂತದ ಆಸೆ ಜೀವಂತವಾಗಿರಿಸಿಕೊಂಡಿದೆ. ಪಂಜಾಬ್ 8 ಪಂದ್ಯಗಳಿಂದ 5 ಜಯ ಹಾಗೂ 3 ಸೋಲಿನೊಂದಿಗೆ 10 ಅಂಕ ಕಲೆಹಾಕಿ ಮುಂಬೈಗಿಂತ ಮೇಲಿನ ಸ್ಥಾನದಲ್ಲಿದೆ.

ಮುಂಬೈ ಪರ ಸೂರ್ಯಕುಮಾರ್ ಯಾದವ್ 42 ಎಸೆತಗಳಲ್ಲಿ 6 ಬೌಂಡರಿ ಹಾಗೂ 3 ಸಿಕ್ಸರ್ ಒಳಗೊಂಡ 57 ರನ್ ಸಿಡಿಸಿ ತಂಡವನ್ನು ಆಧರಿಸಿದರು. ಮಧ್ಯಮ ಕ್ರಮಾಂಕದಲ್ಲಿ ಇಶಾನ್ ಕಿಶನ್ (25) ಮತ್ತು ಹಾರ್ದಿಕ್ ಪಾಂಡ್ಯ (23) ತಂಡವನ್ನು ಆಧರಿಸಿದರು. ಕೊನೆಯಲ್ಲಿ ರೋಹಿತ್ ಶರ್ಮ (24) ಮತ್ತು ಕೃನಾಲ್ ಪಾಂಡ್ಯ (31) ಅಜೇಯರಾಗಿ ತಂಡವನ್ನು ಗೆಲುವಿನ ದಡ ಸೇರಿಸಿದರು.

ಇದಕ್ಕೂ ಮುನ್ನ ಬ್ಯಾಟ್ ಮಾಡಿದ ಪಂಜಾಬ್ ಪರ ಗೇಲ್ 40 ಎಸೆತಗಳಲ್ಲಿ 6 ಬೌಂಡರಿ ಹಾಗೂ 2 ಸಿಕ್ಸರ್ ಒಳಗೊಂಡ 50 ರನ್ ಬಾರಿಸಿ ನಿರ್ಗಮಿಸಿದರು.

  • ಸಂಕ್ಷಿಪ್ತ ಸ್ಕೋರ್
  • ಕಿಂಗ್ಸ್ ಇಲೆವೆನ್ ಪಂಜಾಬ್ 20 ಓವರ್ 6 ವಿಕೆಟ್ 174 (ಗೇಲ್ 50, ರಾಹುಲ್ 24, ಸ್ಟೊನಿಸ್ ಅಜೇಯ 29, ಬುಮ್ರಾ 19/1).
  • ಮುಂಬೈ ಇಂಡಿಯನ್ಸ್ 19 ಓವರ್ 4 ವಿಕೆಟ್ 176 (ಸೂರ್ಯಕುಮಾರ್ 57, ಕೃನಾಲ್ ಅಜೇಯ 31, ರೋಹಿತ್ ಅಜೇಯ 24, ಮಜೀಬ್ 37/2).
  • ಪಂದ್ಯಶ್ರೇಷ್ಠ: ಸೂರ್ಯಕುಮಾರ್ ಯಾದವ್

Next Story

RELATED STORIES