Top

ನಿಧಿ ಆಸೆಗಾಗಿ ಹೆಂಡತಿಯನ್ನೇ ಬಲಿ ಕೊಡಲು ಮುಂದಾಗಿದ್ದ ಪಾಪಿ ಗಂಡ

ನಿಧಿ ಆಸೆಗಾಗಿ ಕಟ್ಟಿಕೊಂಡ ಹೆಂಡತಿಯನೇ ಬಲಿ ಮುಂದಾಗಿರುವ ಘಟನೆ ಬೆಂಗಳೂರಿನ ಹೊರ ವಲಯದಲ್ಲಿ ನಡೆದಿದೆ.

ನಗರದ ಬ್ಯಾಡರಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಉಳ್ಳಾಲದಲ್ಲಿ ವಾಸವಾಗಿರುವ ಮಹಾಲಿಂಗೇಶ್ ತನ್ನ ಹೆಂಡತಿ ಸಾವಿತಾವರನ್ನ ಬಲಿ ಕೊಡಲು ಹೊರಟ್ಟಿದ್ದಾನೆ. ಉಳ್ಳಾಲದಲ್ಲಿರುವ ರುದ್ರಮುನೇಶ್ವ ಎಂಬ ದೇವಸ್ಥಾನವಿದೆ ಅದರ ಒಳಗೆ ನಿಧಿ ಇದೆ. ಆ ನಿಧಿ ಸಿಗ ಬೇಕಾದ್ತೆ ಅದ್ರೆ ದೇವರಿಗೆ ಕುಂಭ ರಾಶಿಯವರನ್ನ ಬಲಿ ಕೊಡಬೇಕಾಗಿತ್ತು ಅದಕ್ಕೆ ಮಹಾಲಿಂಗೇಶ್ ತನ್ನ ಹೆಂಡತಿ ಸಾವಿತ ಅವರನ್ನ ಬಲಿ ಕೊಡೊದಿಕ್ಕೆ ಮುಂದಾಗಿ ಮುಂದಿನ ಅಗಸ್ಟ್ ನಲ್ಲಿ ಬಲಿ ಕೊಡಲು ಸಿದ್ದತೆಯನ್ನು ಮಾಡಿಕೊಂಡಿದ್ದ . ಇನ್ನು ಬಲಿಗೆ ಒಪ್ಕೊ ಅಂತ ಹೇಳಿ ಹೆಂಡತಿ ಸಾವಿತಗೆ ದಿನಗಳು ಕಿರುಕುಳ ಕೊಡುತ್ತಿದ್ದ.

ಇದರಿಂದ ಭಯಗೊಂಡಿದ್ದ ಸಾವಿತ ಇಂದು ರಾಜ್ಯ ಮಹಿಳ ಆಯೋಗಕ್ಕೆ ದೂರು ನೀಡಿದ್ರು.. ದೂರಿ ಪಡೆದ ಮಹಿಳಾ ಆಯೋಗ ಬ್ಯಾಡರಹಳ್ಳಿ ಪೊಲೀಸರ ನೇತೃತ್ವದಲ್ಲಿ ಉಳ್ಲಾಲದ ರುದ್ರೇಮುನೇಶ್ವರ ದೇವಸ್ಥಾನ ರೈಡ್ ಮಾಡಿ ಮಹಾಲಿಂಗೇಶ್ ಅವರನ್ನು ಬ್ಯಾಡರಹಳ್ಳಿ ಪೊಲೀಸರ ವಶಕ್ಕೆ ಕೊಟ್ಟಿದ್ದಾರೆ

Next Story

RELATED STORIES