Top

ದರ್ಶನ್ ಮೊದಲ ಸಿನಿಮಾ ನಿರ್ದೇಶಕ ಇನ್ನಿಲ್ಲ

ನಟ ದರ್ಶನ್ ಅವರನ್ನು ಮೆಜೆಸ್ಟಿಕ್ ಚಿತ್ರದ ಮೂಲಕ ಚಿತ್ರರಂಗಕ್ಕೆ ಪರಿಚಯಿಸಿದ ನಿರ್ದೇಶಕ ಮತ್ತು ನಟ ಪಿ.ಎನ್​. ಸತ್ಯ ವಿಧಿವಶರಾಗಿದ್ದಾರೆ..

ಕ್ಯಾನ್ಸರ್​ನಿಂದ ಬಳಲುತ್ತಿದ್ದ ಸತ್ಯ ಅವರು ಇತ್ತೀಚೆಗಷ್ಟೇ ಚಿಕಿತ್ಸೆ ಪಡೆದು ಮನೆಗೆ ಮರಳಿದ್ದರು. ಆದರೆ ಮನೆಗೆ ಮರಳಿದ ಕೆಲವೇ ಸಮಯದಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

ಮೆಜೆಸ್ಟಿಕ್​, ದಾಸ, ಶಾಸ್ತ್ರೀ, ಶಿವರಾಜ್ ಕುಮಾರ್ ಅಭಿನಯದ ಡಾನ್​, ಸುಗ್ರೀವ, ದುನಿಯಾ ವಿಜಿಯ ಶಿವಾಜಿನಗರ, ಸುದೀಪ್ ಅಭಿಯನದ ಗೂಳಿ.. ಹೀಗೆ ಹತ್ತು ಹಲವು ಸಿನಿಮಾಗಳನ್ನು ನಿರ್ದೇಶಿಸಿದ್ದರು. ಪಾಗಲ್ ಚಿತ್ರದಲ್ಲಿ ನಾಯಕ ನಟನಾಗಿಯೂ ಕಾಣಿಸಿಕೊಂಡಿದ್ದರು. ಸತ್ಯ ಒಟ್ಟು 16 ಚಿತ್ರಗಳನ್ನು ಕನ್ನಡದಲ್ಲಿ ನಿರ್ದೇಶನ ಮಾಡಿದ್ದರು. ಇತ್ತೀಚೆಗೆ ತೆರೆಕಂಡ ಮರಿಟೈಗರ್​ ಸತ್ಯ ಅವರು ನಿರ್ದೇಶಿಸಿದ್ದ ಕೊನೆಯ ಚಿತ್ರವಾಗಿತ್ತು.

Next Story

RELATED STORIES