Top

ಡೆಡ್ಲಿ ಸ್ಟಾರ್ ಆದಿತ್ಯ ಈಸ್ ಬ್ಯಾಕ್

ಡೆಡ್ಲಿ ಸ್ಟಾರ್ ಆದಿತ್ಯ ಈಸ್ ಬ್ಯಾಕ್
X

ಸ್ಯಾಂಡಲ್​ವುಡ್​ನ ಡೆಡ್ಲಿ ಸ್ಟಾರ್ ಆದಿತ್ಯ ಲಾಂಗ್​ ಗ್ಯಾಪ್​ ನಂತರ ಮತ್ತೆ ಸಿನಿಮಾ ಮಾಡುತ್ತಿದ್ದಾರೆ.ದರ್ಶನ್​ ಅಭಿನಯದ ಚಕ್ರವರ್ತಿ ಸಿನಿಮಾದಲ್ಲಿ ಪ್ರಮುಖ ಪಾತ್ರವೊಂದರಲ್ಲಿ ಮಿಂಚಿದ್ದ ಆದಿತ್ಯ ಆ ನಂತರ ತೆರೆಮೇಲೆ ಕಾಣಿಸಿಕೊಳ್ಳಲೇ ಇಲ್ಲ. ಇದೀಗ ಆದಿತ್ಯ ತಮ್ಮ ಹುಟ್ಟುಹಬ್ಬದ ಖುಷಿಯಲ್ಲಿ ಸಿನಿಪ್ರೇಕ್ಷಕರಿಗೆ ಸಿಹಿ ಸುದ್ದಿಯೊಂದನ್ನ ಕೊಟ್ಟಿದ್ದಾರೆ. ಆದಿತ್ಯ ಸೋಲೋ ಹೀರೋ ಆಗಿ ಸೆಕೆಂಡ್​ ಇನ್ನಿಂಗ್ಸ್​ ಶುರು ಮಾಡ್ತಿದ್ದಾರೆ.

ಆದಿತ್ಯ ಅಭಿನಯದ ಹೊಸ ಚಿತ್ರಕ್ಕೆ ‘ಮುಂದುವರೆದ ಅಧ್ಯಾಯ’ ಅಂತ ಟೈಟಲ್​ ಫಿಕ್ಸ್ ಆಗಿದ್ದು, ಈಗಾಗಲೇ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ರಿಲೀಸ್​ ಆಗಿದೆ. ಈ ಹಿಂದೆ ನಾಗತಿಹಳ್ಳಿ ಚಂದ್ರಶೇಖರ್​ ನಿರ್ಮಾಣ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಬಾಲು ಚಂದ್ರಶೇಖರ್​​ ಈ ಚಿತ್ರದ ಮೂಲಕ ನಿರ್ದೇಶಕರಾಗಿ ಚಿತ್ರರಂಗಕ್ಕೆ ಪರಿಚಿತರಾಗ್ತಿದ್ದಾರೆ.ಮುಂದುವರೆದ ಅಧ್ಯಾಯ ರೆವಲ್ಯೂಶನ್​ ಥ್ರಿಲ್ಲರ್ ಸಿನಿಮಾ ಆಗಿದ್ದು, ಜೂನ್​ನಿಂದ ಶೂಟಿಂಗ್​ ಶುರುವಾಗಲಿದೆ. ಚಿತ್ರದಲ್ಲಿ ಆದಿತ್ಯ ಸಂಪೂರ್ಣ ವಿಭಿನ್ನ ಲುಕ್​ ಮತ್ತು ಗೆಟಪ್​ನಲ್ಲಿ ತೆರೆಮೇಲೆ ಕಾಣಿಸಿಕೊಳ್ಳಲಿದ್ದು,ಅಭಿಮಾನಿಗಳಿಗೆ ಡೆಡ್ಲಿ ಸ್ಟಾರ್​ ದರ್ಶನ ಖುಷಿಕೊಡಲಿದೆ.

Next Story

RELATED STORIES