ಕನ್ನಡದ ‘ಅರ್ಜುನ್ ಗೌಡ’ ಪ್ರಜ್ವಲ್ ದೇವರಾಜ್

ಸ್ಯಾಂಡಲ್ವುಡ್ನ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಹೊಸ ಚಿತ್ರವೊಂದಕ್ಕೆ ಸಹಿ ಮಾಡಿದ್ದಾರೆ. ಟಾಲಿವುಡ್ ಬ್ಲಾಕ್ ಬಸ್ಟರ್ ಅರ್ಜುನ್ ರೆಡ್ಡಿ ಚಿತ್ರವನ್ನ ಕನ್ನಡದಲ್ಲಿ ರೀಮೇಕ್ ಮಾಡೋ ಸುದ್ದಿ ಬಹಳ ದಿನಗಳಿಂದ ಕೇಳಿ ಬರ್ತಿದೆ. ಹಾಗಾಗಿ ಅರ್ಜುನ್ ಗೌಡ ಟೈಟಲ್ ಕೇಳ್ತಿದ್ದ ಹಾಗೇ ಇದು ತೆಲುಗಿನ ಅರ್ಜುನ್ ರೆಡ್ಡಿ ರಿಮೇಕ್ ಅಂತ ಅನ್ನಿಸೋದು ಸಹಜ.ಆದ್ರೆ ತೆಲುಗಿನ ಅರ್ಜುನ್ ರೆಡ್ಡಿಗೂ, ಕನ್ನಡದ ಅರ್ಜುನ್ ಗೌಡನಿಗೂ ಯಾವುದೇ ಸಂಬಂಧವಿಲ್ಲ ಅಂತಾರೆ ನಿರ್ದೇಶಕ ಲಕ್ಕಿ ಶಂಕರ್.
ಅರ್ಜುನ್ ಗೌಡ ಚಿತ್ರದಲ್ಲಿ ಪ್ರಜ್ವಲ್ ದೇವರಾಜ್ ಮೂರು ವಿಭಿನ್ನ ಗೆಟಪ್ಗಳಲ್ಲಿ ಕಾಣಿಸಿಕೊಳ್ಳಲಿದ್ದು, ನಾಯಕಿಯ ಹುಡುಕಾಟ ನಡೀತಿದೆಯಂತೆ. ಜೈ ಆನಂದ್ ಕ್ಯಾಮರಾವರ್ಕ್, ಧರ್ಮವಿಶ್ ಸಂಗೀತ ಚಿತ್ರಕ್ಕಿರಲಿದ್ದು, ಕೋಟಿ ರಾಮು ಅರ್ಜುನ್ ಗೌಡ ನಿಗೆ ಬಂಡವಾಳ ಹಾಕುತ್ತಿದ್ದಾರೆ.
ಅರ್ಜುನ್ ಗೌಡ ಚಿತ್ರದಲ್ಲಿ ಸಾಕಷ್ಟು ಆ್ಯಕ್ಷನ್ ಸೀಕ್ವೆನ್ಸ್ಗಳಿರಲಿದ್ದು, ಹೈಬಜೆಟ್ ಸಿನಿಮಾ ಇದಾಗಿದೆ. ಈ ಹಿಂದೆ ರಾಮು ನಿರ್ಮಾಣದ ಲಾಕಪ್ಡೆತ್, ಎಕೆ47, ಕಲಾಸಿಪಾಳ್ಯ ಚಿತ್ರಗಳ ಸಾಲಿಗೆ ಅರ್ಜುನ್ ಗೌಡ ಕೂಡ ಸೇರಲಿದೆಯಂತೆ. ಇದೇ ತಿಂಗಳ ಅಂತ್ಯದೊಳಗೆ ಚಿತ್ರದ ಚಿತ್ರೀಕರಣ ಶುರುವಾಗಲಿದೆ.