Top

ಅರಕಲಗೂಡಿನಲ್ಲಿ "ಮುಖ್ಯಮಂತ್ರಿ" ಚಂದ್ರು ಪ್ರಚಾರ

ಚುನವಾಣೆ ಹತ್ತಿರವಾಗುತ್ತಿದೆ. ಅಭ್ಯರ್ಥಿಗಳು ಮತದಾರರನ್ನು ಸೆಳೆಯಲು ನಾನಾ ಕಸರತ್ತುಗಳನ್ನು ನಡೆಸುತ್ತಿದ್ದಾರೆ. ಹಾಸನದಲ್ಲಿ ಇಂದು ಖ್ಯಾತ ಚಲನಚಿತ್ರ ನಟ ಮುಖ್ಯಮಂತ್ರಿ ಚಂದ್ರು, ಜಿಲ್ಲಾ ಉಸ್ತುವಾರಿ ಸಚಿವ ಎ.ಮಂಜು ಪರ ಚುನವಾಣಾ ಪ್ರಚಾರ ನಡೆಸಿದ್ರು.

ಅರಕಲಗೂಡು ತಾಲೂಕಿನ ಕೇರಳಪುರ,ಬಸವಪಟ್ಟಣ,ಕೊಣನೂರಿಗೆ ಆಗಮಿಸಿದ ಚಂದ್ರು ಬಿಜೆಪಿ ಸರ್ಕಾರ ವಿರುದ್ದ ಹರಿಹಾಯ್ದರು. ಪ್ರಧಾನಿ ನರೇಂದ್ರ ಮೋದಿ ಒಮ್ಮೆ ದೇವೇಗೌಡರನ್ನು ಹೊಗಳುತ್ತಾರೆ. ಮತ್ತೊಮ್ಮೆ ತೆಗಳುತ್ತಾರೆ. ಇದರ ಅರ್ಥ ಬಿಜೆಪಿ ಹಾಗೂ ಜೆಡಿಎಸ್ ಒಳಒಪ್ಪಂದ ಅನ್ನುವುದು ಗೊತ್ತಾಗುತ್ತಿದೆ. ಜೆಡಿಎಸ್​ ಜೊತೆ ಬಿಜೆಪಿಗೆ ಸಂಬಂಧವಿದೆ ಅನ್ನುವುದು ಗೊತ್ತಾದರೆ ಎಲ್ಲಿ ಮಾನ ಹೋಗುತ್ತೋ ಅನ್ನೋ ಭಯದಿಂದ ಈ ರೀತಿಯಾಗಿ ಪ್ಲೇಟ್​ ಬದಲಿಸ್ತಿದ್ದಾರೆ ಎಂದು ಚಂದ್ರು ವ್ಯಂಗ್ಯವಾಡಿದ್ರು.

Next Story

RELATED STORIES