Top

102 ನಾಟೌಟ್​: ಅಮಿತಾಭ್​, ರಿಷಿ ಮೋಡಿ

102 ವರ್ಷದ ವಯೋವೃದ್ಧನಾಗಿ ಅಮಿತಾಭ್​ ಬಚ್ಚನ್ ಹಾಗೂ 70 ವರ್ಷದ ಮಗನಾಗಿ ರಿಷಿಕಪೂರ್ ಅಭಿನಯದ 102 ನಾಟೌಟ್ ಬಾಲಿವುಡ್​ನ ಬಹುನಿರೀಕ್ಷಿತ ಚಿತ್ರ ಶುಕ್ರವಾರ ಬಿಡುಗಡೆಯಾಗಿದೆ. ಮೊದಲ ದಿನವೇ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಹಲವು ದಶಕಗಳ ನಂತರವೂ ಈ ಜೋಡಿ ಮತ್ತೆ ಮೋಡಿ ಮಾಡಿ ಜನರ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ.

102 ಚಿತ್ರದಲ್ಲಿ ಜೀವನಪಾಠ ಕುರಿತ ಸಿದ್ಧಾಂತವನ್ನು ನವಿರಾದ ಹಾಸ್ಯದ ಮೂಲಕ ಹೇಳುವ ಪ್ರಯತ್ನವನ್ನು ನಿರ್ದೇಶಕ ಉಮೇಶ್ ಶುಕ್ಲ ಯಶಸ್ವಿಯಾಗಿದ್ದಾರೆ. ಗುಜರಾತಿ ನಾಟಕದ ಸ್ಫೂರ್ತಿಯಿಂದ ಚಿತ್ರ ಇದ್ದರೂ ಎಲ್ಲೂ ಬೋರಾಗದಂತೆ ನಿರ್ದೇಶಕ ನೋಡಿಕೊಂಡಿದ್ದಾರೆ.

102 ವರ್ಷದ ವೃದ್ಧ ದತ್ತಾತ್ರೆಯ ವಕಾರಿಯಾ (ಅಮಿತಾಭ್) ಮತ್ತು 75 ವರ್ಷದ ಪುತ್ರ ಬಹುಬಲ್ (ರಿಷಿ ಕಪೂರ್) ಉತ್ತಮ ಬಾಂಧವ್ಯ ಇರುವ ತಂದೆ-ಮಗ. ಸದಾ ಕೊರಗುವ ಮಗನಿಗೆ ಜೀವನಪಾಠ ಹೇಳಲು ತಂದೆ ಅನುಸರಿಸುವ ವಿಧಾನವೇ ಕಥಾವಸ್ತು. ಮಗನನ್ನು ಕೊರಗಿನಿಂದ ಮುಕ್ತ ಮಾಡಲು ವೃದ್ಧಾಶ್ರಮಕ್ಕೆ ಸೇರಿಸಲು ತಂದೆ ಮುಂದಾಗುತ್ತಾರೆ. ಮಗ ವಿರೋಧಿಸಿದಾಗ 6 ತಿಂಗಳಲ್ಲಿ 5 ಷರತ್ತು ಪೂರೈಸುವಂತೆ ಬೇಡಿಕೆ ಇಡುತ್ತಾನೆ. ತಂದೆಯ 5 ಷರತ್ತು ಪೂರೈಸುವ ಜೊತೆಗೆ ಜೀವನ ಪಾಠ ಕಲಿಯುವುದೇ ಚಿತ್ರ.

Next Story

RELATED STORIES