Top

ಸಿಎಂ ಪರ ಸುದೀಪ್ ಪ್ರಚಾರಕ್ಕೆ ತೀವ್ರ ವಿರೋಧ

ಸಿಎಂ ಪರ ಸುದೀಪ್ ಪ್ರಚಾರಕ್ಕೆ ತೀವ್ರ ವಿರೋಧ
X

ಬಾಗಲಕೋಟೆಯ ಬಾದಾಮಿಯಲ್ಲಿ ಸಿಎಂ ಸಿದ್ದರಾಮಯ್ಯ ಪರ ಸ್ಟಾರ್ ಪ್ರಚಾರಕ್ಕೆ ವಿಘ್ನ ಎದುರಾಗಿದೆ. ಮೇ 9ರಂದು ನಟ ಕಿಚ್ಚ ಸುದೀಪ್ ಸಿಎಂ ಸಿದ್ದರಾಮಯ್ಯ ಪರ ಪ್ರಚಾರ ಮಾಡಲು ಬಾದಾಮಿಗೆ ಆಗಮಿಸಲಿದ್ದು, ಇದಕ್ಕೆ ಕ್ರಾಂತಿವೀರ ಸಿಂಧೂರ ಲಕ್ಷ್ಮಣ ಯುವಸೇನೆ ಜಿಲ್ಲಾಘಟಕದಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ವಾಲ್ಮೀಕಿ ಸಮುದಾಯ ಮತ ಸೆಳೆಯೋಕ್ಕೆ ಸಿಎಂ ಸಿದ್ದರಾಮಯ್ಯ ಪ್ಲಾನ್ ಮಾಡಿದ್ದು, ವಾಲ್ಮೀಕಿ ಸಮುದಾಯಕ್ಕೆ ಮೀಸಲಾತಿ ಜಾರಿ ಮಾಡದ್ದಕ್ಕೆ ಸಿಎಂ ವಿರುದ್ಧ ಸಂಘಟಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೀಸಲಾತಿ ಜಾರಿ ಮಾಡದ ಸಿಎಂ ಪರ ಸುದೀಪ್ ಪ್ರಚಾರಕ್ಕೆ ಬಂದ್ರೆ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಇನ್ನೊಂದೆಡೆ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಪ್ರಚಾರ ಮಾಡೋಕ್ಕೆ ರೆಡಿಯಾಗಿದ್ದಾರೆ. ಸ್ಟಾರ್ ನಟರ ಕ್ಯಾಂಪೇನ್ ಎಷ್ಟರ ಮಟ್ಟಿಗೆ ಸಕ್ಸಸ್ ಆಗತ್ತೆ ಕಾದು ನೋಡಬೇಕಿದೆ.

Next Story

RELATED STORIES