Top

ರೈತರ 1 ಲಕ್ಷದವರೆಗೆ ಸಾಲಮನ್ನಾ, ಗೋ ಹತ್ಯೆ ನಿಷೇಧ ಕಾಯ್ದೆ ಮರು ಜಾರಿ: ಬಿಜೆಪಿ ಪ್ರಣಾಳಿಕೆ

ಕರ್ನಾಟಕ ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾದ ಬೆನ್ನಲ್ಲೇ ಬಿಜೆಪಿ ತನ್ನ ಪ್ರಣಾಳಿಕೆಯನ್ನು ಶುಕ್ರವಾರ ಬೆಳಗ್ಗೆ ಬೆಂಗಳೂರಿನಲ್ಲಿ ಬಿಡುಗಡೆ ಮಾಡಿತು. ಮುಖ್ಯಮಂತ್ರಿ ಅಭ್ಯರ್ಥಿ ಬಿ.ಎಸ್​. ಯಡಿಯೂರಪ್ಪ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದರು.

ಪ್ರಣಾಳಿಕೆಯಲ್ಲಿನ ಮುಖ್ಯಾಂಶಗಳು

 • ರೈತರ 1 ಲಕ್ಷದವರೆಗಿನ ಸಾಲಮನ್ನಾ
 • ನೇಕಾರರ 1 ಲಕ್ಷದವರೆಗಿನ ಸಾಲಮನ್ನಾ
 • ರಾಷ್ಟ್ರೀಯ ಬ್ಯಾಂಕ್​ಗಳಲ್ಲಿನ ಸಾಲಮನ್ನಾ
 • ಇಂದಿರಾ ಕ್ಯಾಂಟಿನ್ ಹೆಸರನ್ನು ಅನ್ನಪೂರ್ಣ ಕ್ಯಾಂಟೀನ್ ಆಗಿ ಬದಲು
 • ವಿವಾಹ ಮಂಗಲ ಯೋಜನೆಯಡಿ ಬಿಪಿಎಲ್​ ಕಾರ್ಡ್​ ಮಹಿಳೆಯರ ವಿವಾಹಕ್ಕೆ 25 ಸಾವಿರ ರೂ. 3.5 ಗ್ರಾಂ ತಾಳಿ
 • ಡಾ.ಬಿ.ಆರ್​. ಅಂಬೇಡ್ಕರ್​ಗೆ ಸಂಬಂಧಿಸಿದ ಕ್ಷೇತ್ರಗಳ ತೀರ್ಥಯಾತ್ರೆಗೆ ನೆರವು
 • ರಾಜ್ಯದ ಎಲ್ಲಾ ತಾಲೂಕುಗಳಲ್ಲಿ 108 ಆ್ಯಂಬುಲೆನ್ಸ್
 • ರೇಷ್ಮೆ ಬೆಳೆಗಾರರಿಗೆ 1 ಲಕ್ಷದವರೆಗೆ ರೇಸ್ಮೆ ಸಬ್ಸಿಡಿ
 • 2023ರೊಳಗೆ ನೀರಾವರಿ ಯೋಜನೆ ಪೂರ್ಣಗೊಳಿಸಲು 1.50 ಲಕ್ಷ ಕೋಟಿ ಮೀಸಲು
 • ಶೇ.1ರ ಬಡ್ಡಿದರದಲ್ಲಿ ಸ್ತ್ರೀ ಶಕ್ತಿ ಸ್ವಸಹಾಯ ಸಂಘಗಳಿಗೆ ಸಾಲ
 • ಮಹಿಳೆಯರ ರಕ್ಷಣೆಗಾಗಿ ಸಾವಿರ ಮಹಿಳೆಯರ ರಕ್ಷಣಾ ತಂಡ
 • ಬಿಪಿಎಲ್​ ಕಾರ್ಡ್​ ಹೊಂದಿರುವ ಮಹಿಳೆಯರಿಗೆ ಸ್ಮಾರ್ಟ್​ ಕಾರ್ಡ್​ ವಿತರಣೆ
 • ಎಸ್​ಸಿ/ಎಸ್​ಟಿ ವಿದ್ಯಾರ್ಥಿಗಳ ಸ್ಕಾಲರ್​ಶಿಪ್​ ಮೊತ್ತ ಹೆಚ್ಚಳ
 • ಕೆಎಂಎಫ್​ ಮೂಲಕ ಹಣ್ಣು, ತರಕಾರಿ ವಿದೇಶಗಳಿಗೆ ರಫ್ತು ಯೋಜನೆ
 • ಎಸ್​ಸಿ/ಎಸ್​ಟಿ ಸಮುದಾಯದರ ವಸತಿ ಯೋಜನೆಗೆ 8500 ಕೋಟಿ ರೂ.

Next Story

RELATED STORIES