Top

ರುಂಡ-ಮುಂಡ ಬೇರ್ಪಡಿಸಿ ಬರ್ಬರ ಹತ್ಯೆ

ಬೆಂಗಳೂರಿನಲ್ಲಿ ವ್ಯಕ್ತಿಯೋರ್ವನ ರುಂಡ ಮುಂಡ ಬೇರ್ಪಡಿಸಿ, ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಬೆಂಗಳೂರಿನ ಗಂಗಮ್ಮನಗುಡಿಯ ರಾಮಚಂದ್ರಾಪುರ ಬಸ್ ಸ್ಟಾಪ್ ಬಳಿ ಈ ಘಟನೆ ನಡೆದಿದ್ದು, ಡೇವಿಡ್(42) ಎಂಬಾತನನ್ನು ಬರ್ಬರವಾಗಿ ಕೊಲ್ಲಲಾಗಿದೆ. ಜೋರಾಗಿ ಮಳೆ ಬರುತ್ತಿದ್ದ ಸಂದರ್ಭದಲ್ಲಿ ಡೇವಿಡ್ ನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ , ರುಂಡ ಒಂದೆಡೆ ಮುಂಡ ಒಂದೆಡೆ ಬಿಸಾಕಿ ವಿಕೃತಿ ಮೆರೆದಿದ್ದಾರೆ. ಹಳೇ ದ್ವೇಷದ ಹಿನ್ನೆಲೆ ಕೊಲೆ ಮಾಡಿರುವ ಶಂಕೆ ಉಂಟಾಗಿದ್ದು, ಈ ಕುರಿತು ಗಂಗಮ್ಮನಗುಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

--------------------------

Next Story

RELATED STORIES