Top

ಯೋಗಿ ಕರ್ನಾಟಕದಲ್ಲಿ ಮಠ ಕಟ್ಟಿಕೊಂಡು ಅಲ್ಲಿಯೇ ಇರಲಿ: ಅಖಿಲೇಶ್ ಆಕ್ರೋಶ

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕರ್ನಾಟಕದಲ್ಲಿ ಮಠ ಕಟ್ಟಿಕೊಂಡು ಅಲ್ಲಿಯೇ ಇರಲಿ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಮಾಜವಾದಿ ಪಕ್ಷದ ಮುಖಂಡ ಅಖಿಲೇಶ್ ಯಾದವ್ ಹೇಳಿದ್ದಾರೆ.

ಧೂಳು ಹಾಗೂ ಬಿರುಗಾಳಿಯಿಂದ 70ಕ್ಕೂ ಅಧಿಕ ಮಂದಿ ಮೃತಪಟ್ಟ ದಾರುಣ ಘಟನೆಯಿಂದ ಇಡೀ ಉತ್ತರ ಪ್ರದೇಶ ತತ್ತರಿಸಿದ್ದರೂ ಕರ್ನಾಟಕದಲ್ಲಿ ಚುನಾವಣಾ ಪ್ರಚಾರದಲ್ಲಿ ಮುಳುಗಿರುವ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದ ಬೆನ್ನಲ್ಲೇ ಅಖಿಲೇಶ್ ಯಾದವ್ ಕೂಡ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಯೋಗಿ ಆದಿತ್ಯನಾಥ್ ಅವರನ್ನು ಜನ ಆಯ್ಕೆ ಮಾಡಿರುವುದು ತಮ್ಮ ಸಮಸ್ಯೆಗಳಿಗೆ ಸ್ಪಂದಿಸಲಿ ಎಂದು. ಕರ್ನಾಟಕದಲ್ಲಿ ಚುನಾವಣಾ ಪ್ರಚಾರ ಮಾಡಿ ಅಂತ ಅಲ್ಲ. ಇಂತಹ ಭೀಕರ ಪರಿಸ್ಥಿತಿ ನಡುವೆಯೂ ಅವರು ರಾಜ್ಯಕ್ಕೆ ಮರಳಿ ಪರಿಹಾರ ಕಾರ್ಯ ಕೈಗೊಳ್ಳದೇ ಇದ್ದಲ್ಲಿ. ಕರ್ನಾಟಕದಲ್ಲಿ ಮಠ ಕಟ್ಟಿಕೊಂಡು ಅಲ್ಲಿಯೇ ಇರಲಿ. ಇಲ್ಲಿಗೆ ಬರುವುದು ಬೇಡ ಎಂದು ಅಖಿಲೇಶ್ ಆಕ್ರೋಶ ವ್ಯಕ್ತಪಡಿಸಿದರು.

Next Story

RELATED STORIES