Top

ಮೋದಿ ವಿರುದ್ಧ ಡಾ.ಜಿ.ಪರಮೇಶ್ವರ್ ವಾಕ್ಪ್ರಹಾರ

ಮೋದಿ ವಿರುದ್ಧ ಡಾ.ಜಿ.ಪರಮೇಶ್ವರ್ ವಾಕ್ಪ್ರಹಾರ
X

ನಮ್ಮ ಸರ್ಕಾರದ ಸಾಧನೆ ಜನರಿಗೆ ಮುಟ್ಟಿದೆ. ಸ್ವಂತ ಬಲದ ಮೇಲೆ ನಾವೇ ಅಧಿಕಾರಕ್ಕೆ ಬರುತ್ತೇವೆಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ ಪರಮೇಶ್ವರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ ಎಂದು ಹೇಳಿದ್ದಾರೆ. ಈ ವೇಳೆ ಪ್ರಧಾನಿ ಮೋದಿ ವಿರುದ್ಧ ಹರಿಹಾಯ್ದ ಪರಮೇಶ್ವರ್ ಉಲ್ಟಾ ಕೋರ್ ಕೋತ್ವಾಲ್ಕಾ ಧ್ಯಾನ್ ಅಂತ ಗಾದೆಯಿದೆ. ಆ ಗಾದೆಯಂತೆ ಪ್ರಧಾನಿ ನಡೆದುಕೊಳ್ಳುತ್ತಿದ್ದಾರೆ. 100 ದಿನಗಳಲ್ಲಿ ಕಪ್ಪು ಹಣ ವಾಪಸ್ ತರುತ್ತೇವೆ ಎಂದು ಹೇಳಿದ್ದರು. 2 ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಹೇಳಿದ್ದರು. ಆದರೆ 5 ಲಕ್ಷ ಉದ್ಯೋಗ ಸೃಷ್ಟಿಯನ್ನೂ ತಲುಪಿಲ್ಲ. ಪ್ರಧಾನಿ ಮೋದಿ ಕೊಟ್ಟ ಭರವಸೆ ಈಡೇರಿಸಿಲ್ಲ ಅಂದರೆ, ಬೇರೆಯವರ ಬಗ್ಗೆ ಹೇಗೆ ಆರೋಪ ಮಾಡುತ್ತೀರಾ ಅಂತಾ ಮೋದಿಗೆ ಪ್ರಶ್ನಿಸಿದ್ದಾರೆ.

ಮೋದಿ ವಿರುದ್ಧ ವಾಕ್ಪ್ರಹಾರ ಮುಂದುವರೆಸಿದ ಡಾ.ಜಿ.ಪರಮೇಶ್ವರ್, ಸಿಎಂ ಬಗ್ಗೆ ಎರಡು ಕಡೆ ನಿಲ್ಲುವುದರ ಬಗ್ಗೆ ಮೋದಿ ಪ್ರಶ್ನೆ ಎತ್ತಿದ್ದಾರೆ. ನಾನು ಕೇಳುತ್ತೇನೆ ನೀವು ಯಾಕೆ ಎರಡೂ ಕಡೆ ಸ್ಪರ್ಧಿಸುತ್ತಿದ್ದೀರಿ, ವಾರಣಾಸಿ ವಡೋದರಾದಲ್ಲಿ ಸ್ಪರ್ಧೆ ಮಾಡಿದ್ರಿ ಎಂದು ಪ್ರಧಾನಿ ಮೋದಿಗೆ ಪರಮೇಶ್ವರ್ ಟಾಂಗ್ ನೀಡಿದ್ದಾರೆ.

ಖರ್ಗೆಯವರನ್ನು ಸಿಎಂ ಮಾಡಲಿಲ್ಲವೆಂದು ಮೋದಿ ನೀಡಿದ್ದ ಹೇಳಿಕೆಗೆ ತಿರುಗೇಟು ನೀಡಿದ ಪರಮೇಶ್ವರ್, ನಮ್ಮಲ್ಲಿ ದಲಿತರಿಗೆ ಉತ್ತಮ ಅವಕಾಶ ನೀಡಲಾಗಿದೆ. ಖರ್ಗೆಯವರನ್ನು ವಿಪಕ್ಷ ನಾಯಕನನ್ನಾಗಿ ಮಾಡಿದ್ದೇವೆ. ನೀವು ನಮ್ಮದೇ ಸರ್ಕಾರ ಅಧಿಕಾರಕ್ಕೆ ಬರಲಿದೆ ಅಂತೀರಾ. ಹಾಗಾದರೆ ನೀವು ದಲಿತರನ್ನ ಸಿಎಂ ಮಾಡಿ ಎಂದು ಸವಾಲ್ ಹಾಕಿದ್ರು.ಅಲ್ಲದೇ ಅಟ್ರಾಸಿಟಿ ಕಾಯ್ದೆಯನ್ನೇ ಬದಲಾವಣೆ ಮಾಡೋಕೆ ಹೊರಟಿದ್ದೀರಿ. ಯಾಕೆ ಬದಲಾವಣೆ ಮಾಡಬೇಕು. ನಿಮಗೆ ದಲಿತರ ಮೇಲೆ ಪ್ರೀತಿ ಇದ್ದರೆ ಹಾಗೆಯೇ ಬಿಟ್ಟುಬಿಡಿ. ಇದನ್ನ ನೋಡಿದ್ರೆ ನಿಮ್ಮ ದಲಿತ ಪ್ರೀತಿ ಗೊತ್ತಾಗುತ್ತದೆ ಎಂದು ಪ್ರಧಾನಿ ಮೋದಿಗೆ ಡಾ.ಜಿ.ಪರಮೇಶ್ವರ್ ತಿರುಗೇಟು ನೀಡಿದ್ದಾರೆ.

Next Story

RELATED STORIES