Top

ದರ್ಶನ್​​​ ಎಂದೆಂದಿಗೂ ನನ್ನ ಸ್ನೇಹಿತ: ಕಿಚ್ಚ ಸುದೀಪ್ ಮನ್​ಕಿ ಬಾತ್

ದರ್ಶನ್​​​ ಎಂದೆಂದಿಗೂ ನನ್ನ ಸ್ನೇಹಿತ: ಕಿಚ್ಚ ಸುದೀಪ್ ಮನ್​ಕಿ ಬಾತ್
X

ದಶಕಗಳ ಕಾಲ ಸ್ನೇಹಿತರಾಗಿದ್ದ ಸುದೀಪ್-ದರ್ಶನ್, ಸಣ್ಣ ಮನಸ್ತಾಪದಿಂದ ಮುನಿಸಿಕೊಂಡು ದೂರಾಗಿರೋದು ಎಲ್ಲರಿಗೂ ಗೊತ್ತೇಯಿದೆ. ಅದೂ, ದರ್ಶನ್ ಟ್ವಿಟರ್ ನಲ್ಲಿ ಸುದೀಪ್​​​, ನನ್ನ ಸ್ನೇಹಿತನಲ್ಲ ಎಂದು ಸಾರುವವರೆಗೆ ಅವ್ರ ಸಂಬಂಧ ಬಂದು ತಲುಪಿತ್ತು. ಅಭಿಮಾನಿಗಳಿಗೂ ಈ ವಿಚಾರ ಬೇಸರ ತಂದಿತ್ತು. ಅಲ್ಲಿವರೆಗೂ ಚಿತ್ರರಂಗದ ಸಭೆ ಸಮಾರಂಭದಲ್ಲಿ ಹೆಗಲ ಮೇಲೆ ಕೈ ಹಾಕಿಕೊಂಡು ಕಾಣಿಸಿಕೊಳ್ತಿದ್ದ, ಗೆಳೆಯರು ಆನಂತ್ರ ಜೊತೆಯಾಗಿ ಕಾಣಿಸಿಕೊಳ್ಳಲೇ ಇಲ್ಲ. ಇದೇ ವಿಚಾರಕ್ಕೆ ಸಂಬಂಧಿಸಿ ಪತ್ರಿಕೆಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ದರ್ಶನ್​ ಎಂದೆಂದಿಗೂ ನನ್ನ ಸ್ನೇಹಿತ ಅಂತ ಸುದೀಪ್ ಹೇಳಿದ್ದಾರೆ.

ದರ್ಶನ್ ಜೊತೆಗಿನ ಸ್ನೇಹದ ಬಗ್ಗೆ ಕೇಳಿದ ಪ್ರಶ್ನೆಗೆ ನನಗೆ ಯಾವ ಬೇಸರವೂ ಇಲ್ಲ. ಯಾರೋ ಅವನ ತಲೆಗೆ ಏನೋ ತುಂಬಿದ್ದಾರೆ. ಅದಕ್ಕೆ ಕೋಪ ಮಾಡಿಕೊಂಡಿದ್ದಾರೆ. ನನಗೆ ಗೊತ್ತಿರೋ ಪ್ರಕಾರ ವನ್ ಸೈಡ್ ಆಫ್ ಹಿಮ್ ಈಸ್ ವೆರಿ ಸ್ವೀಟ್. ನಾನು ಅವನನ್ನು ಚಿಕ್ಕಂದಿನಿಂದಲೂ ನೋಡಿದ್ದೀನಿ. ನನ್ನ ಬಗ್ಗೆ ಅವನು ತುಂಬ ಪೊಸೆಸಿವ್ ಆಗಿದ್ದ '' ಅಂತ ಸುದೀಪ್ ಹೇಳಿದ್ದಾರೆ.

“ನನ್ನ ಜೀವನದಲ್ಲಿ ನಡೆದ ಕೆಲವು ಘಟನೆಗಳಿಂದ ಅವನಿಗೆ ಬೇಸರ ಆಗಿರಬಹುದು. ಆದರೆ ಅವೆಲ್ಲ ತಮ್ಮ ಪಾಡಿಗೆ ನಡೆದ ಸಂಗತಿಗಳು. ಹಾಗೆ ನೋಡಿದರೆ, ಯಾರ ಮೇಲಾದರೂ ದ್ವೇಷ ಸಾಧಿಸೋದಾದರೂ ಯಾಕೆ?. ಎಲ್ಲರೂ ಸಾಧಕರೆ. ಇವತ್ತು ಶಿವಣ್ಣ ನಾನು ಚೆನ್ನಾಗಿದ್ದೀವಿ ಅಂದರೆ ಅವರ ಮೇಲೆ ಮೊದಲಿಂದಲೂ ಪ್ರೀತಿ ಇತ್ತು. ಮಧ್ಯದಲ್ಲಿ ಹಾಳಾಗಿತ್ತು. ಆದೂ ಸತ್ಯವೇ. ಅದಕ್ಕೂ ಕಾರಣ ಇತ್ತು’’-ಸುದೀಪ್

“ಫ್ರೆಂಡ್ ಆಗಿರೋದಕ್ಕೆ ದಿನವೂ ಭೇಟಿ ಆಗಲೇಬೇಕು ಅಂತೇನಿಲ್ಲ. ಗೆಳೆಯನಿಗೆ ಒಳ್ಳೆದಾಗ್ಲಿ ಅನ್ನೋ ಹಾರೈಕೆ ಮನದಲ್ಲಿದ್ದರೆ ಸಾಕಲ್ವಾ ಅದು ಯಾವತ್ತು ಇರುತ್ತದೆ. ಫ್ರೆಂಡ್ ಅಂದ್ರೆ ಯಾವಾಗಲೂ ಒಳ್ಳೆಯದನ್ನು ಬಯಸುವವನು. ದರ್ಶನ್ ಯಾವತ್ತು ನನ್ನ ಫ್ರೆಂಡ್. ಫ್ರೆಂಡ್ ಶಿಪ್ ನಲ್ಲಿ ಅಜೆಂಡಾ ಇರಬಾರದು. ಬದುಕಿನ ತುಂಬಾ ಪ್ಲಾನ್ ಗಳಿರಬಾರದು.'' ಹೀಗೆ ತಮ್ಮ ನೆಚ್ಚಿನ ಗೆಳೆಯನ ಬಗ್ಗೆ ಸುದೀಪ್ ಮನಬಿಚ್ಚಿ ಮಾತನಾಡಿದ್ದಾರೆ.

ಇತ್ತೀಚೆಗಷ್ಟೆ ದರ್ಶನ್​ ಅಭಿಮಾನಿಯೊಬ್ಬರು ಟ್ವಿಟ್ಟರ್​​ನಲ್ಲಿ ಯಾವಾಗ ಡಿಬಾಸ್ ಜೊತೆ ಸಿನಿಮಾ ಮಾಡ್ತೀರಾ..? ಅಂತ ಕೇಳಿದ ಪ್ರಶ್ನೆಗೆ ‘ಒಳ್ಳೆ ಕಥೆ ಸಿಕ್ಕರೆ ಕಂಡಿತ ಜೊತೆಯಾಗಿ ನಟಿಸ್ತೀವಿ ಅಂತ ಸುದೀಪ್ ಉತ್ತರಿಸಿದ್ದರು. ದರ್ಶನ್​​-ಸುದೀಪ್ ಮತ್ತೆ ಒಂದಾಗಲಿ. ಇಬ್ಬರು ಸೇರಿ ಸಿನಿಮಾ ಮಾಡಲಿ ಅನ್ನೋದು ಅಭಿಮಾನಿಗಳ ಆಸೆಯಾಗಿದೆ.

Next Story

RELATED STORIES