Top

ಟಿಪ್ಪು ಹೆಸರು ಎಳೆದು ತಂದ ಪಾಕ್​: ಕರ್ನಾಟಕ ಚುನಾವಣೆಗೆ ಎಂಟ್ರಿ...!

ಟಿಪ್ಪು ಹೆಸರು ಎಳೆದು ತಂದ ಪಾಕ್​: ಕರ್ನಾಟಕ ಚುನಾವಣೆಗೆ ಎಂಟ್ರಿ...!
X

ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆ ಇಡೀ ದೇಶದ ಗಮನ ಸೆಳೆದಿರುವುದು ಎಲ್ಲರಿಗೂ ತಿಳಿದ ವಿಚಾರ. ಈಗ ಪಾಕಿಸ್ತಾನ ಕೂಡ ಪರೋಕ್ಷವಾಗಿ ರಂಗಪ್ರವೇಶಿಸುವ ಮೂಲಕ ಕದನ ಕುತೂಹಲ ಹೆಚ್ಚಿದೆ.

ಹೌದು, ಶುಕ್ರವಾರ ಪಾಕಿಸ್ತಾನ ಸರಕಾರ ತನ್ನ ಅಧಿಕೃತ ವೆಬ್​ಸೈಟ್ ನಲ್ಲಿ ಮೈಸೂರು ಸಂಸ್ಥಾನದ ರಾಜ ಟಿಪ್ಪು ಸುಲ್ತಾನ್ ಅವರನ್ನು ಹಾಡಿ ಹೊಗಳಿ ಟ್ವೀಟ್ ಮಾಡಿದ್ದೂ ಅಲ್ಲದೇ ವೀಡಿಯೊ ಕೂಡ ಬಿಡುಗಡೆ ಮಾಡಿದೆ.

ಪ್ರಸ್ತುತ ಟಿಪ್ಪು ಜಯಂತಿ ಅಥವಾ ಆತನಿಗೆ ಸಂಬಂಧಿಸಿದ ಯಾವುದೇ ಘಟನೆ, ಬೆಳವಣಿಗೆಗಳು ಇಲ್ಲದಿದ್ದರೂ ಪಾಕಿಸ್ತಾನ ಈ ರೀತಿ ಟಿಪ್ಪು ಕುರಿತು ವೀಡಿಯೊ ಬಿಡುಗಡೆ ಹಾಗೂ ಟ್ವೀಟ್ ಮಾಡಿರುವುದು ಅನುಮಾನಕ್ಕೆ ಕಾರಣವಾಗಿದೆ.

ಕರ್ನಾಟಕ ವಿಧಾನಸಭೆ ಚುನಾವಣೆಯ ಮೇಲೆ ತನ್ನ ಪ್ರಭಾವ ಬೀರಲು ಪಾಕಿಸ್ತಾನ ಈ ರೀತಿಯ ಕೃತ್ಯ ಮಾಡಿದೆಯೇ ಎಂಬ ಅನುಮಾನ ಕಾಡುತ್ತಿದ್ದು, ರಾಜಕೀಯ ನಾಯಕರು ಈ ಘಟನೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ.

Next Story

RELATED STORIES