Top

ಜನಾರ್ದನ ರೆಡ್ಡಿ ಬಳ್ಳಾರಿ ಪ್ರವೇಶಕ್ಕೆ ಸುಪ್ರೀಂಕೋರ್ಟ್ ತಡೆ

ಗಣಿ ಹಗರಣದಲ್ಲಿ ವಿಚಾರಣೆ ಬಾಕಿ ಇರುವ ಹಿನ್ನೆಲೆಯಲ್ಲಿ ಗಾಲಿ ಜನಾರ್ದನ ರೆಡ್ಡಿ ಬಳ್ಳಾರಿ ಪ್ರವೇಶಕ್ಕೆ ಸುಪ್ರೀಂಕೋರ್ಟ್ ಅನುಮತಿ ನೀಡಲು ನಿರಾಕರಿಸಿದೆ. ಈ ಮೂಲಕ ಶ್ರೀರಾಮುಲು ಮತ್ತಿತರ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ಮಾಡುವ ರೆಡ್ಡಿ ಕನಸು ಭಗ್ನಗೊಂಡಿದೆ.

ಮೇ 12ರಂದು ಕರ್ನಾಟಕ ವಿಧಾನಸಭಾ ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಬಳ್ಳಾರಿ ಪ್ರವೇಶಕ್ಕೆ ಅನುಮತಿ ಕೋರಿ ಉದ್ಯಮಿ ಜನಾರ್ದನ ರೆಡ್ಡಿ ನ್ಯಾಯಾಲಯದ ಮೊರೆ ಹೋಗಿದ್ದರು. ಪ್ರಸ್ತುತ ಜಾಮೀನಿನ ಮೇಲೆ ಸಿಬಿಐ ಜೈಲಿನಿಂದ ಹೊರ ಬಂದಿರುವ ರೆಡ್ಡಿಗೆ ಬಳ್ಳಾರಿ ಪ್ರವೇಶಿಸದಂತೆ ಷರತ್ತು ವಿಧಿಸಲಾಗಿತ್ತು.

ಬಳ್ಳಾರಿಯಲ್ಲಿ 10 ದಿನಗಳ ಕಾಲ ಇರಲು ಅವಕಾಶ ಕೋರಿ ರೆಡ್ಡಿ ಅನುಮತಿ ಕೋರಿದ್ದರು. ಈ ಅವಧಿಯಲ್ಲಿ ಶ್ರೀರಾಮಲು, ಕರುಣಾಕರ ರೆಡ್ಡಿ ಮುಂತಾದವರ ಪರ ಪ್ರಚಾರ ಮಾಡಲು ರೆಡ್ಡಿ ಉದ್ದೇಶಿಸಿದ್ದರು.

Next Story

RELATED STORIES