Top

ಛೋಟಾ ರಾಜನ್ ಸೇರಿ 8 ಮಂದಿಗೆ ಜೀವಾವಧಿ ಶಿಕ್ಷೆ

2011ರಲ್ಲಿ ಹಿರಿಯ ಪತ್ರಕರ್ತ ಜ್ಯೋತಿರ್ಮಯಿ ಡೇ ಅವರನ್ನು ಕೊಲೆ ಮಾಡಿದ ಪ್ರಕರಣದಲ್ಲಿ ಭೂಗತ ಪಾತಕಿ ಛೋಟಾ ರಾಜನ್ ಸೇರಿ 8 ಆರೋಪಿಗಳಿಗೆ ಮಹಾರಾಷ್ಟ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.

ನ್ಯಾಯಮೂರ್ತಿಗಳಾದ ಸಮೀರ್ ಅಡ್ಕರ್ ಅವರನ್ನೊಳಗೊಂಡ ಹೈಕೋರ್ಟ್ ಪೀಠ, ಪ್ರಮುಖ ಆರೋಪಿಗಳಾದ ಛೋಟಾ ರಾಜನ್, ಮಾಜಿ ಪತ್ರಕರ್ತ ಜಿಗ್ನಾ ಓರಾ, ಪೌಲ್ಸನ್ ಜೋಸೆಫ್ ಸೇರಿ ಎಂಟು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ. ಈ ಹಿಂದೆಯೂ ಕೂಡ ನಕಲಿ ಪಾಸ್ ಪೋರ್ಟ್ ಹಗರಣದಲ್ಲಿ ಛೋಟಾ ರಾಜನ್ ಗೆ 7 ವರ್ಷ ಜೈಲು ಶಿಕ್ಷೆ ವಿಧಿಸಲಾಗಿತ್ತು.

ಜೂನ್ 11ರ 2011ರಲ್ಲಿ ಜ್ಯೋತಿರ್ಮಯಿ ಡೇ ಅವರನ್ನ, ಇಬ್ಬರು ದುಷ್ಕರ್ಮಿಗಳು ಗುಂಡಿಟ್ಟು ಕೊಂದಿದ್ದರು. ತನ್ನ ಬಗ್ಗೆ ಡೇ ಅವರು ವರದಿ ಮಾಡಿದ್ದರಿಂದ ಛೋಟಾ ರಾಜನ್ ತನ್ನ ಸಹಚರರಿಂದ ಹತ್ಯೆ ಮಾಡಿಸಿದ್ದನು.

Next Story

RELATED STORIES