Top

ಚುನಾವಣೆ ವೇಳೆ ಗೌಡರನ್ನು ಮೋದಿ ಹೊಗಳಿದ್ದೇಕೆ? ಡಿಕೆಶಿ ಪ್ರಶ್ನೆ

ಪ್ರಜಾಪ್ರಭುತ್ವಕ್ಕೆ ಗೌರವ ಸಿಗುವುದು ಕಾಂಗ್ರೆಸ್ ನಿಂದ ಮಾತ್ರ ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್ ಹೇಳಿಕೆ ನೀಡಿದ್ದಾರೆ.

ಪ್ರೆಸ್ ಕ್ಲಬ್ ನಲ್ಲಿ ಸಂವಾದ ನಡೆಸಿದ ಡಿಕೆಶಿ, ದೇಶವೇ ರಾಜ್ಯದ ಚುನಾವಣೆಯತ್ತ ಕಣ್ಣಿಟ್ಟಿದೆ. ನಾನು ರಾಜ್ಯದ ಎಲ್ಲಾ ಕಡೆ ಪ್ರವಾಸ ಮಾಡಿದ್ದೇನೆ. ಹೋದಕಡೆಯೆಲ್ಲಾ ಸಾಕಷ್ಟು ಪ್ರೋತ್ಸಾಹ ಸಿಕ್ಕಿದೆ. ಇದರಿಂದ ಆತ್ಮವಿಶ್ವಾಸ ಹೆಚ್ಚಾಗಿದೆ ಎಂದು ಹೇಳಿದ್ದಾರೆ. ಅಲ್ಲದೇ ಕೆಲವರು ಅಧಿಕಾರದ ಮುಹೂರ್ತ ಫಿಕ್ಸ್ ಮಾಡ್ತಾರೆ. ಅವರು ಮಾಡಿಕೊಳ್ಳಲಿ, ಬಿಜೆಪಿಯವರ ಟಾರ್ಗೇಟ್ 160 ಸೀಟು, ದಳದವರು 70 ಸೀಟಿಗೆ ಕಣ್ಣಿಟ್ಟಿದ್ದಾರೆ. ಇವರೆಲ್ಲರೂ ನಾವೇ ಅಧಿಕಾರಕ್ಕೆ ಬರುತ್ತೇವೆ ಎಂದು ಕೂತಿದ್ದಾರೆ ಎಂದು ಬಿಜೆಪಿ, ಜೆಡಿಎಸ್ ನಾಯಕರ ಕನಸಿನ ಬಗ್ಗೆ ಡಿಕೆಶಿ ವ್ಯಂಗ್ಯವಾಡಿದ್ದಾರೆ.

ಬಿಜೆಪಿ ಜೆಡಿಎಸ್ ಮೈತ್ರಿ ಬಗ್ಗೆ ಮಾತನಾಡಿದ ಡಿಕೆಶಿ, ಮೋದಿಯನ್ನ ನೋಡಿ ರಾಜ್ಯದ ಜನರು ಓಟು ನೀಡಲ್ಲ. ಸ್ಥಳೀಯ ನಾಯಕರು ಏನು ಮಾಡಿದ್ದಾರೆ ಅನ್ನೋದು ಮುಖ್ಯ. ಅದನ್ನ ಮುಂದಿಟ್ಟುಕೊಂಡೇ ಜನ ತೀರ್ಮಾನಿಸುತ್ತಾರೆ ಎಂದರು. ಮೋದಿ ರಾಜ್ಯಕ್ಕೆ ಬಂದು ದೇವೇಗೌಡರನ್ನ ಹೊಗಳಿದರು. ಇದನ್ನ ನೋಡಿದ್ರೆ, ಜೆಡಿಎಸ್,ಬಿಜೆಪಿ ಮೈತ್ರಿ ಬಗ್ಗೆ ಅನುಮಾನವಿದೆ ಎಂದು ಹೇಳಿದ್ದಾರೆ.

Next Story

RELATED STORIES