Top

ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸ್ಟಾರ್ ವಾರ್

ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸ್ಟಾರ್ ವಾರ್
X

ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ, ರಾಜಕಾರಣಿಗಳು ಸ್ಟಾರ್ ಪ್ರಚಾರಕರನ್ನು ಕರೆತಂದು ಪ್ರಚಾರ ಮಾಡಲು ರೆಡಿಯಾಗಿದ್ದಾರೆ. ಈ ಸಮಯದಲ್ಲಿ ರಾಜ್ಯದ ಪ್ರಮುಖ ಆಕರ್ಷಣೆಯಾಗಿರುವುದು ಮೈಸೂರು ಜಿಲ್ಲೆ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿಎಂ ಸಿದ್ದರಾಮಯ್ಯ, ಜಿ.ಟಿ.ದೇವೇಗೌಡರ ಪ್ರಚಾರದ ಭರಾಟೆ ಮುಂದುವರೆದಿದೆ.

ಒಂದೆಡೆ ಸಿಎಂ ಸಿದ್ದರಾಮಯ್ಯ ಪರ ಬಾಲಿವುಡ್ ಸ್ಟಾರ್ ನಗ್ಮಾ ಪ್ರಚಾರ ನಡೆಸಿದ್ರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡ ಸಿಎಂ ಪರ ಪ್ರಚಾರ ಮಾಡಲು ರೆಡಿಯಾಗಿದ್ದಾರೆ. ಬಿಜೆಪಿ ಅಭ್ಯರ್ಥಿ ರಾಮದಾಸ್ ಪರ ನಟ ಯಶ್ ಪ್ರಚಾರ ಮಾಡಿದ್ದಾರೆ.

ಇನ್ನು ಈ ಎಲ್ಲ ಸ್ಟಾರ್ ಪ್ರಚಾರಕರಿಗೆ ಸೆಡ್ಡು ಹೊಡೆಯುವಂತೆ ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಜಿ.ಟಿ.ದೇವೇಗೌಡರು ಪ್ರಚಾರ ಕೈಗೊಂಡಿದ್ದಾರೆ. ಚಾಮುಂಡೇಶ್ವರಿ ಕ್ಷೇತ್ರದ ಕೋಟೆ ಹುಂಡಿ, ಯಡಗಳ್ಳಿ ಸೇರಿದಂತೆ 10ಕ್ಕೂ ಹೆಚ್ಚು ಗ್ರಾಮಗಳಲ್ಲಿ ಪ್ರಚಾರ ನಡೆಸಿದ್ದಾರೆ. ಜಿಟಿಡಿಗೆ ಸ್ಥಳೀಯ ಹಾಗೂ ಜಿ.ಪಂ ಗ್ರಾ.ಪಂ ಸದಸ್ಯರು ಸಾಥ್ ನೀಡಿದ್ದಾರೆ. ಗ್ರಾಮಸ್ಥರು ತಮಟೆ ಬಾರಿಸುವ ಮೂಲಕ ಜಿಟಿಡಿಗೆ ಅದ್ಧೂರಿ ಸ್ವಾಗತ ನೀಡಿದ್ದು, ಹೋದ ಕಡೆಯೆಲ್ಲ ಸಿಎಂ ವಿರುದ್ಧ ಜಿಟಿಡಿ ಕಿಡಿಕಾರಿದ್ದಾರೆ.

Next Story

RELATED STORIES