Top

ಕಿರುತೆರೆ ನಟನ ಮೇಲೆ ಮತ್ತೊಂದು ದೂರು ದಾಖಲು

ಕಿರುತೆರೆ ನಟ ಕಿರಣ್ ರಾಜ್ ಮೇಲೆ ಮತ್ತೊಂದು ದೂರು ದಾಖಲಾಗಿದೆ. ಈ ಹಿಂದೆ ಕಿರುಕುಳ ಆರೋಪದಡಿ ದೂರು ನೀಡಿದ್ದ ಯಾಸ್ಮೀನ್ ಎಂಬಾಕೆಯಿಂದ ಮತ್ತೊಂದು ದೂರು ದಾಖಲಾಗಿದೆ. ಫಿಲ್ಮ್ ಇಂಡಸ್ಟ್ರಿಯಲ್ಲಿ ಒಳ್ಳೆ ಅವಕಾಶ ಕೊಡಸುತ್ತೇನೆಂದು ಯಾಸ್ಮೀನ್ ನಿಂದ ಕಿರಣ್ ರಾಜ್ ಪಾಸ್ ಪೋರ್ಟ್ ಪಡೆದಿದ್ದು, ಪಾಸ್ ಪೋರ್ಟ್ ನೀಡದೇ ಕಿರಣ್ ರಾಜ್ ಮತ್ತು ಆತನ ಕುಟುಂಬ ಯಾಸ್ಮೀನ್ ಗೆ ಕಿರುಕುಳ ನೀಡುತ್ತಿರೋ ಆರೋಪ ಕೇಳಿಬಂದಿದೆ. ಪಾಸ್ ಪೋರ್ಟ್ ಕೇಳಿದಕ್ಕೆ ಹಣದ ಬೇಡಿಕೆ ಇಟ್ಟು, ಜೀವ ಬೆದರಿಕೆ ಹಾಕಿದ್ದಾನೆಂದು, ಕಿರಣ್ ರಾಜ್ ವಿರುದ್ಧ ಯಾಸ್ಮೀನ್ ಆರೋಪ ಮಾಡಿದ್ದಾರೆ. ವಿದೇಶಕ್ಕೆ ಚಿತ್ರೀಕರಣಕ್ಕೆಂದು ಪಾಸ್ ಪೋರ್ಟ್ ಕೇಳಿದ್ದು, ಪಾಸ್ ಪೋರ್ಟ್ ಕೈತಪ್ಪಿದ ಹಿನ್ನೆಲೆ, ಕೆಲಸ ಕೈ ತಪ್ಪಿದ್ದು, ಕಿರಣ್ ರಾಜ್ ವಿರುದ್ಧ ರಾಜ ರಾಜೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ 420, 506, 384 ಸೆಕ್ಷನ್ ಅಡಿ ಪ್ರಕರಣ ದಾಖಲಾಗಿದೆ.

Next Story

RELATED STORIES