Top

ಎಂಇಪಿ ಸಂಸ್ಥಾಪಕಿ ನೌಹೇರಾ ಶೇಖ್ ಮೇಲೆ ಹಲ್ಲೆ

ಬೆಂಗಳೂರು: ಮತಯಾಚನೆಗೆ ತೆರಳಿದ್ದ ಎಂಇಪಿ ಪಕ್ಷದ ಸಂಸ್ಥಾಪಕಿ ನೌಹೇರಾ ಶೇಖ್ ಮೇಲೆ ಹಲ್ಲೆ ನಡೆಸಲಾಗಿದೆ. ಬಾಲಿವುಡ್ ತಾರೆಯರ ಜೊತೆ ಪ್ರಚಾರ ಮಾಡುತ್ತಿದ್ದ ಸಂದರ್ಭದಲ್ಲಿ , ನಾಗವಾರ ಹುಡುಗರು ಕಲ್ಲುತೂರಿ ಗೂಂಡಾಗಿರಿ ನಡೆಸಿದ್ದಾರೆ.ಕೂದಲೆಳೆ ಅಂತರದಲ್ಲಿ ನೌಹೇರಾ ಶೇಖ್ ಪಾರಾಗಿದ್ದು, ಸಚಿವ ಜಾರ್ಜ್ ಬೆಂಬಲಿಗರು ಕೃತ್ಯ ನಡೆಸಿರುವ ಶಂಕೆ ವ್ಯಕ್ತಪಡಿಸಿದ್ದಾರೆ. ಇನ್ನು ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ, ನೌಹೇರಾ ಶೇಖ್, ಇದನ್ನೆಲ್ಲ ನೋಡಿದ್ರೆ, ಎಂತಹ ಸರ್ಕಾರ ನಮ್ಮನ್ನು ಆಳುತ್ತಿದೆ ಎನಿಸಿದೆ. ಸರ್ಕಾರ ಎಷ್ಟು ನಿದ್ರೆಯಲ್ಲಿ ಇದೆ ಅಂತ ಗೊತ್ತಾಗ್ತಿದೆ. ಗೂಂಡಾಗಿರಿ ಸರ್ಕಾರವನ್ನ ನಾವು ದೂರ ಮಾಡ್ಬೇಕಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದರು. ಎಂಇಪಿ ಅಭ್ಯರ್ಥಿ ಜಯಲಕ್ಷ್ಮಿ ಮಾತನಾಡಿ, ನಮ್ಮ ಮೇಲೆಯೇ ಈ ರೀತಿ ದಾಳಿ ನಡೆದಿದೆ.ಇನ್ನು ಮಾಮೂಲಿ ಮಹಿಳೆ ಪರಿಸ್ಥಿತಿ ಹೇಗಿರಬೇಕು, ಸರ್ಕಾರಕ್ಕೆ ನಾಚಿಕೆ ಆಗಬೇಕು, ಈ ಯಾವ ಗೊಡ್ಡು ಬೆದರಿಕೆಗೂ ನಾನು ಹೆದರುವುದಿಲ್ಲ. ನಮಗೆ ಎಲ್ಲಿ ಅಟ್ಯಾಕ್ ಆಗಿದೆಯೋ ಅಲ್ಲಿಂದಲೇ ನಾವು ರ್ಯಾಲಿ ಮಾಡುತ್ತೇವೆ ಎಂದು ಹೇಳಿದ್ದಾರೆ.

Next Story

RELATED STORIES