Top

ಜೆಡಿಎಸ್ ಸ್ವಂತ ಬಲದಲ್ಲಿ ಸರ್ಕಾರ ರಚಿಸಲು ಸಾಧ್ಯವಿಲ್ಲ- ಮೋದಿ

ಭಯೋತ್ಪಾದಕರ ಜೊತೆ ಮೈತ್ರಿ ಮಾಡಿಕೊಂಡ ಜೆಡಿಎಸ್ ಪಕ್ಷ ಮೂರನೇ ಸ್ಥಾನದಲ್ಲೇ ಇರುತ್ತೆ ಎಂದು ಪ್ರಧಾನಿ ಮೋದಿ, ಜೆಡಿಎಸ್ ಪಕ್ಷದ ವಿರುದ್ಧ ವ್ಯಂಗ್ಯವಾಡಿದ್ದಾರೆ.ವಿಧಾನಸಭೆ ಚುನಾವಣೆಗಾಗಿ ಕರ್ನಾಟಕದಲ್ಲಿ ಪ್ರಚಾರ ಕೈಗೊಂಡಿರುವ ಪ್ರಧಾನಿ ಮೋದಿ, ಬೆಂಗಳೂರಿನ ಕೆಂಗೇರಿಯಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ಭಾಗವಹಿಸಿದರು. ಇಷ್ಟು ದಿನ ರಾಜ್ಯ ಸರ್ಕಾರ ಮತ್ತು ಸಿಎಂ ಸಿದ್ದರಾಮಯ್ಯ ವಿರುದ್ಧ ಕಿಡಿಕಾರುತ್ತಿದ್ದ ಮೋದಿ ಇಂದು ಜೆಡಿಎಸ್ ಪಕ್ಷಕ್ಕೂ ಟಾಂಗ್ ನೀಡಿದ್ರು. ನಿನ್ನೆ ತಾನೇ ಮಾಜಿ ಪ್ರಧಾನಿ ದೇವೇಗೌಡರನ್ನು ಹಾಡಿ ಹೊಗಳಿದ್ದ ಪ್ರಧಾನಿ ಮೋದಿ, ಇಂದು ಜೆಡಿಎಸ್ ಮೂರನೇ ಸ್ಥಾನದಲ್ಲೇ ಇರುತ್ತೆ ಅಂತಾ ವ್ಯಂಗ್ಯವಾಡಿದ್ದಾರೆ. ಕಾಂಗ್ರೆಸ್ ತೊಲಗಿಸಲು ಜೆಡಿಎಸ್ ಗೆ ಸಾಧ್ಯವಿಲ್ಲ. ಜೆಡಿಎಸ್ ಗೆ ಬಹುಮತ ಬರಲು ಸಾಧ್ಯವಿಲ್ಲ. ಹೀಗಿದ್ದಲ್ಲಿ, ಜೆಡಿಎಸ್ ಪಕ್ಷಕ್ಕೆ ಮತ ಹಾಕುವ ತಪ್ಪು ಕೆಲಸ ಯಾವ ಮತದಾರರಾದರೂ ಮಾಡ್ತಾರಾ ಎಂದು ನೆರೆದಿದ್ದ ಜನರಲ್ಲಿ ಪ್ರಶ್ನಿಸಿದರು. ಅಲ್ಲದೇ, ಅನ್ಯರಾಜ್ಯಗಳ ಅತಿ ಸಂಪ್ರದಾಯವಾದಿ, ಭಯೋತ್ಪಾದಕ ಸಂಘಟನೆಗಳ ಜೊತೆ ಮೈತ್ರಿ ಮಾಡಿಕೊಂಡು ಕರ್ನಾಟಕದಲ್ಲಿ ಸ್ಪರ್ಧಿಸುವಂತೆ ಮಾಡಿ ರಾಜ್ಯದ ಜನತೆಗೆ ಜೆಡಿಎಸ್ ಅನ್ಯಾಯ ಮಾಡಿದೆ ಎಂದು ಮೋದಿ ಟೀಕೆ ಮಾಡಿದ್ದಾರೆ.

Next Story

RELATED STORIES