Top

ಇಸ್ರೋ ಕಚೇರಿಯಲ್ಲಿ ಬೆಂಕಿ ಆಕಸ್ಮಿಕ

ಅಹಮದಾಬಾದ್​ನ ಇಸ್ರೋ ಕಚೇರಿಯಲ್ಲಿ ಗುರುವಾರ ಬೆಂಕಿ ಆಕಸ್ಮಿಕ ಸಂಭವಿಸಿದ್ದು, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ಪಶ್ಚಿಮ ಅಹಮದಾಬಾದ್​ನಲ್ಲಿನ ಸ್ಯಾಟಲೈಟ್​ಗಳು ಇರಿಸಿರುವ ಪ್ರದೇಶದಲ್ಲಿ ಬೆಂಕಿ ಆಕಸ್ಮಿಕ ಸಂಭವಿಸಿದ್ದು, ಸುಮಾರು 25 ಅಗ್ನಿಶಾಮಕ ದಳದ ವಾಹನಗಳು ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸುವ ಪ್ರಯತ್ನ ನಡೆಸಿದವು.

ಬೆಂಕಿ ನಂದಿಸಲು ಸುಮಾರು ಎರಡೂವರೆ ಗಂಟೆ ಕಾಲ ಶ್ರಮಿಸಲಾಗಿದ್ದು, ಥರ್ಮಕೋಲ್​ಗೆ ಬೆಂಕಿ ಅಂಟಿಕೊಂಡಿದ್ದರಿಂದ ಹೊಗೆ ದಟ್ಟವಾಗಿ ಆವರಿಸಿತ್ತು. ಸಿಬ್ಬಂದಿ ಕೂಡಲೇ ಎಚ್ಚೆತ್ತುಕೊಂಡಿದ್ದರಿಂದ ಯಾರಿಗೂ ಗಾಯ ಸಹ ಆಗಿಲ್ಲ ಎಂದು ಇಸ್ರೊದ ಅಧಿಕಾರಿಗಳು ತಿಳಿಸಿದ್ದಾರೆ.

Next Story

RELATED STORIES