ಮೊರಾಕ್ಕೊ: ಫಿಫಾ ವಿಶ್ವಕಪ್ ಬಿಡ್ ಗೆ ಸಲಿಂಗಕಾಮವೇ ಅಡ್ಡಿ!
TV5 Kannada19 April 2018 6:41 AM GMT
ರಬಾತ್(ಮೊರಾಕ್ಕೊ): 2026ರ ಫಿಫಾ ವಿಶ್ವಕಪ್ ಆಯೋಜಿಸಲು ಉತ್ಸಾಹ ತೋರಿರುವ ಉತ್ತರ ಆಫ್ರಿಕಾದ ಮೊರಾಕ್ಕೊ ಬಿಡ್ ಮಾಡಿದೆ.
ವಿಶ್ವಕಪ್ ಬಿಡ್ ನ ಸಾಮಾರ್ಥ್ಯ ಪರೀಕ್ಷೆಗೆ ಫಿಫಾ ಟಾಸ್ಕ್ ಫೋರ್ಸ್ ಈಗಾಗಲೇ ಮೊರಾಕ್ಕೊಗೆ ತೆರಳಿದ್ದು ಫುಟ್ಬಾಲ್ ನ ಶ್ರೇಷ್ಠ ಟೂರ್ನಿಗೆ ಎದುರಾಗಬಹುದಾದ ಅಪಾಯ ಹಾಗೂ ದೇಶದ ಆರ್ಥಿಕ ಸಾಮರ್ಥ್ಯಗಳನ್ನು ಪರಿಶೀಲನೆ ಮಾಡಲಿದೆ.
ಇದರ ನಡುವೆ ಸಲಿಂಗಕಾಮದ ವಿಚಾರವೇ ಫಿಫಾ ವಿಶ್ವಕಪ್ ಬಿಡ್ ಗೆ ಅಡ್ಡಿಯಾಗುವ ಸಾಧ್ಯತೆಯಿದೆ. ಮೊರಕ್ಕೊ ದೇಶದ ನೀತಿ ಸಂಹಿತೆ 489ರ ಪ್ರಕಾರ, ಸಲಿಂಗಕಾಮ ಅಪರಾಧ. ಇದಕ್ಕಾಗಿ 6 ತಿಂಗಳಿಂದ ಗರಿಷ್ಠ 3 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗುತ್ತದೆ.
ಮೊರಕ್ಕಾದ ಮಾನವ ಹಕ್ಕುಗಳ ಆಯೋಗ ಫಿಫಾಗೆ ಸಲ್ಲಿಸಿರುವ ವರದಿಯಲ್ಲಿ ಸಲಿಂಗಕಾಮದ ಕುರಿತಾಗಿ ಉದ್ದೇಶಪೂರ್ವಕ ಮೌನ ತಾಳಿದೆ. ದೇಶದ ಇದು ಅಪರಾಧ ಎನ್ನುವ ಸಂಗತಿ ಅವರಿಗೂ ತಿಳಿದಿದೆ ಎಂದು ಅಧ್ಯಕ್ಷ ಅಹ್ಮದ್ ಎಲ್ ಹೈಜಿ ಹೇಳಿದ್ದಾರೆ.
Next Story