Top

ತಮ್ಮದೆ ನಿರ್ಮಾಣ ಸಂಸ್ಥೆ ಹುಟ್ಟು ಹಾಕಲಿರುವ ರಾಕಿಂಗ್ ಸ್ಟಾರ್ ಯಶ್

ತಮ್ಮದೆ ನಿರ್ಮಾಣ ಸಂಸ್ಥೆ ಹುಟ್ಟು ಹಾಕಲಿರುವ ರಾಕಿಂಗ್ ಸ್ಟಾರ್ ಯಶ್
X

ಸ್ಯಾಂಡಲ್ವುಡ್ ನ ರಾಕಿಂಗ್ ಸ್ಟಾರ್ ಯಶ್ ಇದೀಗ ತಮ್ಮದೇ ಆದ ನಿರ್ಮಾಣ ಸಂಸ್ಥೆಯೊಂದನ್ನು ಹುಟ್ಟು ಹಾಕಲು ಮುಂದಾಗಿದ್ದಾರೆ.

ಕನ್ನಡದ ಚಿತ್ರರಂಗದ ಯಶಸ್ವಿ ನಾಯಕ ಎಂದು ಗುರುತಿಸಿಕೊಂಡಿರುವ ಯಶ್ ಅವರು ಸಾಮಾಜಿಕ ಮಾಧ್ಯಮದಲ್ಲಿ ಅಭಿಮಾನಿಯೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ತಮ್ಮದೇ ನಿರ್ಮಾಣ ಸಂಸ್ಥೆಯನ್ನು ಹುಟ್ಟು ಹಾಕುವುದಾಗಿ ಹೇಳಿದ್ದಾರೆ.

ನಿರ್ಮಾಣ ಸಂಸ್ಥೆಯೊಂದನ್ನು ಹುಟ್ಟು ಹಾಕಿ ಅದರಲ್ಲಿ ಯುವ ಪ್ರತಿಭೆ ಹಾಗೂ ನವ ನಿರ್ದೇಶಕರಿಗೆ ಅವಕಾಶ ನೀಡಿ ಪ್ರೋತ್ಸಾಹಿಸಲಾಗುವುದು. ಅನೇಕ ಹೊಸ ಪ್ರತಿಭೆಗಳು ಕೆಲವು ಅದ್ಭುತವಾದ ಕಥೆಗಳನ್ನು ಹೊಂದಿರುತ್ತಾರೆ ಮತ್ತು ನಿರ್ಮಾಪಕರಿಗಾಗಿ ಹುಡುಕುತ್ತಿರುತ್ತಾರೆ ಅಂತಹವರಿಗೆ ನಾನು ಚಿತ್ರ ಮಾಡಲು ಬಯಸುತ್ತೇನೆ ಎಂದು ಯಶ್ ಬರೆದುಕೊಂಡಿದ್ದಾರೆ.

ಇನ್ನು ತಮ್ಮದೆ ನಿರ್ಮಾಣ ಸಂಸ್ಥೆಯಲ್ಲಿ ನಟಿಸುವ ಉದ್ದೇಶವನ್ನು ಯಶ್ ಹೊಂದಿದ್ದಾರೆ. ಇನ್ನು ನಿರ್ಮಾಣ ಸಂಸ್ಥೆ ಹುಟ್ಟು ಹಾಕುವ ಮುನ್ನ ಎಲ್ಲವನ್ನೂ ಚೆನ್ನಾಗಿ ಯೋಜಿಸಬೇಕೆಂದು ಹೇಳಿದ್ದಾರೆ.

Next Story

RELATED STORIES