ಡ್ರೈ ಗುಲಾಬ್ ಜಾಮೂನ್
TV5 Kannada19 April 2018 6:25 AM GMT
ಬೇಕಾಗುವ ಪದಾರ್ಥಗಳು
- ಸಕ್ಕರೆ- 1.5 ಬಟ್ಟಲು
- ನೀರು - 1.5 ಬಟ್ಟಲು
- ಕೇಸರಿ - 3-4 ದಳ
- ಏಲಕ್ಕಿ ಪುಡಿ - ಚಿಟಿಕೆ
- ನಿಂಬೆ ರಸ- ಸ್ವಲ್ಪ
- ಹಾಲಿನ ಪುಡಿ - 1 ಬಟ್ಟಲು
- ಮೈದಾ ಹಿಟ್ಟು - ಮುಕ್ಕಾಲು ಬಟ್ಟಲು
- ರವೆ - 1 ಚಮಚ
- ಬೇಕಿಂಗ್ ಪೌಡರ್ - ಚಿಟಿಕೆ
- ತುಪ್ಪ - ಸ್ವಲ್ಪ
- ಡೆಸಿಕೇಟೆಡ್ ಕೊಕೋನಟ್/ತರಿತರಿಯಾಗಿ ಪುಡಿ ಮಾಡಿದ ಕೊಬ್ಬರಿ ತುರಿ - 1 ಬಟ್ಟಲು
- ಮೊಸರು - 1 ಚಮಚ
- ಬಿಸಿ ಹಾಲು -3-4 ಚಮಚ
ಮಾಡುವ ವಿಧಾನ...
- ಮೊದಲು ಪಾತ್ರೆಯೊಂದನ್ನು ತೆಗೆದುಕೊಂಡು ಅದಕ್ಕೆ, ಸಕ್ಕರೆ, ನೀರು, ಏಲಕ್ಕಿ ಪುಡಿ, ನಿಂಬೆ ರಸವನ್ನು ಹಾಕಿ ಪಾಕ ತಯಾರು ಮಾಡಿಟ್ಟುಕೊಳ್ಳಬೇಕು.
- ನಂತರ ಮತ್ತೊಂದು ಪಾತ್ರೆ ತೆಗೆದುಕೊಂಡು ಅದಕ್ಕೆ ಹಾಲಿನ ಪುಡಿ, ಮೈದಾ, ರವೆ, ಬೇಕಿಂಗ್ ಪೌಡರ್, ತುಪ್ಪವನ್ನು ಚೆನ್ನಾಗಿ ಮಿಶ್ರಣ ಮಾಡಬೇಕು. ನಂತರ ಇದಕ್ಕೆ ಮೊಸರು, ಬಿಸಿ ಹಾಲು ಹಾಕುತ್ತಾ ಚೆನ್ನಾಗಿ ಮಿಶ್ರಣ ಮಾಡಿ ಹಿಟ್ಟನ್ನು ತಯಾರಿ ಮಾಡಿಕೊಳ್ಳಬೇಕು.
- ನಂತರ ಇದನ್ನು ಸಣ್ಣ ಸಣ್ಣ ಉಂಡೆಗಳನ್ನಾಗಿ ಮಾಡಿಕೊಳ್ಳಬೇಕು. ಒಲೆಯ ಮೇಲೆ ಬಾಣಲೆಯಿಟ್ಟು ತುಪ್ಪ ಸಣ್ಣ ಉರಿಯಲ್ಲಿ ತುಪ್ಪನ್ನು ಕಾಯಿಸಿ, ಮಾಡಿಟ್ಟುಕೊಂಡ ಉಂಡೆಗಳನ್ನು ಹಾಕಿ ಸಣ್ಣ ಉರಿಯಲ್ಲಿಯೇ ಚಿನ್ನದ ಬಣ್ಣ ಬರುವವರೆಗೂ ಕರಿದುಕೊಳ್ಳಬೇಕು.
- ನಂತರ ಈ ಉಂಡೆಗಳನ್ನು ತಣ್ಣಗಾದ ಪಾಕಕ್ಕೆ ಹಾಕಿ, ಅರ್ಧ ಗಂಟೆಗಳ ಬಳಿಕ ತೆಗೆದು ಕೊಬ್ಬರಿ ತುರಿಯಲ್ಲಿ ಹೊರಳಿಸಿದರೆ, ರುಚಿಕರವಾದ ಡ್ರೈ ಗುಲಾಬ್ ಜಾಮೂನ್ ಸವಿಯಲು ಸಿದ್ಧ.
Next Story